fbpx
ಸಮಾಚಾರ

ಆ್ಯಮಿ ಜಾಕ್ಸನ್​ ಸಂಸಾರದಲ್ಲಿ ಬಿರುಕು? ಪ್ರಿಯಕರನಿಂದ ದೂರವಾದ ‘ದಿ ವಿಲನ್​’ ನಟಿ

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್​ಸಂಸಾರದಲ್ಲಿ ಬಿರುಗಾಳಿ ಬೀಸುವ ಸೂಚನೆ ಸಿಕ್ಕಿದೆ. ಇನ್​ಸ್ಟಾಗ್ರಾಮ್​ನಲ್ಲಿ ಆ್ಯಮಿ ಹೀಗೊಂದು ಸೂಚನೆ ನೀಡಿದ್ದಾರೆ.

ಉದ್ಯಮಿ ಮ್ಯಾಗ್ನೇಜ್ ಜಾರ್ಜ್ ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಗರ್ಭಿಣಿಯಾದ ನಂತರ ಇಬ್ಬರೂ ನಿಶ್ಚಿತಾರ್ಥ​ ಮಾಡಿಕೊಂಡರು. 2019ರಲ್ಲಿ ಆ್ಯಮಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ, ಈಗ ಮ್ಯಾಗ್ನೇಜ್​ ಜತೆ ಆ್ಯಮಿ ಬ್ರೇಕಪ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಕ್ಕೂ, ಈ ಸುದ್ದಿ ಹುಟ್ಟಿಕೊಳ್ಳೋಕೆ ಕಾರಣ ಏನೆಂದರೆ ಮ್ಯಾಗ್ನೇಜ್ ಜತೆ ಇರುವ ಸಾಕಷ್ಟು ಫೋಟೋಗಳನ್ನು ಆ್ಯಮಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಆ ಎಲ್ಲಾ ಫೋಟೋಗಳನ್ನು ಆಮಿ ಡಿಲೀಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಪ್ರಿಯಕರನ ಫೋಟೋಗಳನ್ನ ಡಿಲೀಟ್ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top