fbpx
ಸಮಾಚಾರ

ದರ್ಶನ್ ಜೊತೆಗಿನ ಫೋಟೋ ಡಿಲೀಟ್ ಮಾಡುವಂತೆ ಕುರುಕ್ಷೇತ್ರ ‘ಭೀಮ’ನಿಗೆ ಒತ್ತಾಯ: ನಟ ಹೇಳಿದ್ದೇನು

ಕಳೆದ ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭಾರಿ ಸುದ್ದಿಯಲ್ಲಿದ್ದಾರೆ. 25 ಕೋಟಿ ಬ್ಯಾಂಕ್ ವಂಚನೆ ಪ್ರಕರಣ, ಪ್ರೇಮ್ ಮತ್ತು ದರ್ಶನ್ ನಡುವಿನ ವಿವಾದ, ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ನಡುವಿನ ಮಾತಿನ ಚಕಮಕಿ ವಿಚಾರ ಹೀಗೆ ಮುಂತಾದ ವಿಚಾರಗಳಲ್ಲಿ ದರ್ಶನ್ ಪದೇಪದೇ ಸುದ್ದಿಯಾಗಿದ್ದರು. ಈ ಎಲ್ಲಾ ವಿವಾದಗಳು ಸದ್ಯ ತಣ್ಣಗಾಗಿವೆ.

 

 

ಈ ಮಧ್ಯೆ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದ್ದ ಬಾಲಿವುಡ್ ನಟ ಡ್ಯಾನಿಷ್ ಅಕ್ತಾರ್ ಸೈಫಿ ಅವರು ದರ್ಶನ್ ವಿಚಾರವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯ ಡಿಪಿಯಲ್ಲಿ ದರ್ಶನ್ ಜೊತೆಗಿರುವ ಫೋಟೋವನ್ನು ಡ್ಯಾನಿಷ್ ಹಾಕಿಕೊಂಡಿದ್ದರು..ಇದೀಗ ಈ ಡಿಪಿಯನ್ನು ಬದಲಿಸುವಂತೆ ಅನೇಕರು ಕೇಳುತ್ತಿದ್ದಾರಂತೆ. ಈ ವಿಚಾರವನ್ನು ಸ್ವತಃ ಡ್ಯಾನಿಷ್ ಅಕ್ತಾರ್ ಅವರೇ ಹೇಳಿಡ್ಕೊಂಡಿದ್ದಾರೆ.

“ಕರ್ನಾಟಕದ ಕೆಲವು ಜನರು ದರ್ಶನ್ ಸರ್ ಅವರೊಂದಿಗೆ ಉರ್ ಪ್ರೊಫೈಲ್ ಪಿಕ್ಚರ್ ಡಿಪಿ ಬದಲಾಯಿಸಿ ಎಂದು ಹೇಳುತ್ತಾರೆ. .. ನಾನು ಎಂದಿಗೂ ದರ್ಶನ್ ಸರ್ ಅವರೊಂದಿಗೆ ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುವುದಿಲ್ಲ ಎಂದು ಹೇಳಲು ಬಯಸುತ್ತೇನೆ..ದರ್ಶನ್ ಸರ್ ನನ್ನ ಹೃದಯದಲ್ಲಿದೆ … ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ” ಎಂದು ಡ್ಯಾನಿಷ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ದರ್ಶನ್ ಜೊತೆಗಿರುವ ತಮ್ಮ ಡಿಪಿಯನ್ನು ಬದಲಿಸುವುದಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top