fbpx
ಸಮಾಚಾರ

ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರು ಅಪಘಾತ: ಫ್ರೆಂಡ್ ಸ್ಥಳದಲ್ಲೇ ಸಾವು, ನಟಿಗೆ ಗಂಭೀರ ಗಾಯ

ಬಿಗ್ ಬಾಸ್ ತಮಿಳು ಸ್ಪರ್ಧಿ ಖ್ಯಾತ ನಟಿ ಯಶಿಕಾ ಆನಂದ್ ಅವರು ಚಲಿಸುತ್ತಿದ್ದ ಕಾರು ಭೀಕರವಾಗಿ ಅಪಘಾತಕ್ಕೆ ಈಡಾಗಿದೆ. ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಯಶಿಕಾ ಆನಂದ್​ ಅವರಿಗೆ ಗಂಭೀರ ಗಾಯಗಳಾಗಿವೆ. ಅವರ ಜೊತೆ ಪ್ರಯಾಣ ಮಾಡುತ್ತಿದ್ದ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಯಶಿಕಾ ಆನಂದ್ ಮತ್ತು ವಲ್ಲಿಚೆಟ್ಟಿ ಭವಾನಿ ಅವರು ಇನ್ನಿಬ್ಬರು ಪುರುಷ ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಮರಳುತ್ತಿದ್ದರು. ಭವಾನಿ ಅವರು ಅಮೆರಿಕದಲ್ಲಿ ಸಾಫ್ಟ್‍ವೇರ್ ಕಂಪನಿ ಉದ್ಯೋಗಿ ಆಗಿದ್ದರು. ಈಸ್ಟ್ ಕೋಸ್ಟ್ ರೋಡ್‍ನಲ್ಲಿ ಶನಿವಾರ (ಜು.24) ರಾತ್ರಿ 11.45ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಪಲ್ಟಿ ಆಗಿ ಎಲ್ಲರಿಗೂ ತೀವ್ರ ಗಾಯಗಾಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯಶೀಕಾ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತರಾದರು ಎಂಬ ಸುದ್ದಿ ಕೇಳಿಬಂದಿದೆ.

ಘಟನೆ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಲ್ಲಿಚೆಟ್ಟಿ ಭವಾನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಾಲ್‌ಪೆಟ್ ಆಸ್ಪತ್ರೆಗೆ ಕಳುಹಿಸಿದರು. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ವೈದ್ಯರಿನ್ನೂ ವರದಿ ನೀಡಿಲ್ಲ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top