fbpx
ಸಮಾಚಾರ

‘ಗೂಗ್ಲಿ’ ಸಿನಿಮಾ ನಟಿಗೆ ಕೂಡಿಬಂತು ಕಂಕಣ ಭಾಗ್ಯ: ಕೃತಿ ಮದುವೆ ಅಗಲಿರೋ ಹುಡ್ಗ ಯಾರು ಗೊತ್ತಾ?

‘ಗೂಗ್ಲಿ’ ಸಿನಿಮಾ ಮೂಲಕ ಗಮನಸೆಳೆದ ನಟಿ ಕೃತಿ ಕರಬಂಧ ಅವರು ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಿದ್ದಾರೆ. ಆಗಾಗ ಅವರು ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಲವ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಲಿತ್ತು. ಆದರೆ ಕೃತಿ ಮಾತ್ರ ಮದುವೆ ಕುರಿತು ಇಲ್ಲಿಯವರೆಗೆ ಅಷ್ಟಾಗಿ ಬಾಯಿಯೇ ಬಿಟ್ಟಿರಲಿಲ್ಲ. ಈಗ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮದುವೆ ಪ್ಲ್ಯಾನ್ ಬಿಚ್ಚಿಟ್ಟಿದ್ದಾರೆ.

ಸ್ನೇಹಿತ/ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ಯೋಚನೆಯ ಕುರಿತು ಮಾಧ್ಯಮವೊಂದರಲ್ಲಿ ಅವರು ಮಾತನಾಡಿದ್ದು, ತಾನು ಸಾಮ್ರಾಟ್ ಜೊತೆ ಒಡನಾಟದಲ್ಲಿರುವುದು ಮುಕ್ತವಾಗಿ ಹೇಳಿಕೊಂಡಿದ್ದರೂ ಸಹ ಉಳಿದ ವಿಚಾರಗಳನ್ನು ಗೌಪ್ಯವಾಗಿಯೇ ಇಡಲು ಬಯಸುವುದಾಗಿ ತಿಳಿಸಿದ್ದಾರೆ.

ನೀವು ಅದ್ದೂರಿ ಮದುವೆಯನ್ನು ಇಷ್ಟಪಡುತ್ತೀರಾ ಎಂಬ ಪ್ರಶ್ನೆಗೆ ಕೃತಿ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ತಾನು ಆ ಕ್ಷಣದ್ದನ್ನು ಮಾತ್ರ ಯೋಚಿಸಬಲ್ಲೆ. ಹೀಗಾಗಿ ಆ ಕುರಿತು ತಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಭವಿಷ್ಯದ ಬಗ್ಗೆ ಯಾರಿಗೂ ತಿಳಿದಿಲ್ಲ. ಹಾಗಾಗಿ ಈ ಪ್ಲಾನ್ ಎಲ್ಲಾ ಮಾಡುವುದು ಏಕೆ ಎಂದು ನಗುತ್ತಾರೆ ಕೃತಿ. ಏನಾಗಬೇಕೋ ಅದು ಆಗುತ್ತದೆ. ಆದರೆ ಏನಾಗುತ್ತದೆ ಎಂದು ನನಗಿನ್ನೂ ತಿಳಿದಿಲ್ಲ. ನಿಮ್ಮಂತೆ ನನಗೂ ಆ ಸಮಯದಲ್ಲಿ ಆಶ್ಚರ್ಯವಾಗಬಹುದು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ ಕೃತಿ ಕರಬಂಧ. ಒಟ್ಟಾರೆಯಾಗಿ ಕೃತಿ ಕರಬಂಧ ಮದುವೆಯ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮದುವೆಯ ಸುಳಿವು ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top