fbpx
ಸಮಾಚಾರ

ಮುದ್ದು ಮಗನ ನಾಮಕರಣ ಸಂಭ್ರಮದಲ್ಲಿ ಹರ್ಭಜನ್: ಮಗನಿಗೆ ವಿಶಿಷ್ಟ ಹೆಸರು ಇಟ್ಟ ಭಜ್ಜಿ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ದಂಪತಿಗೆ ಜುಲೈ 10ರಂದು ಎರಡನೇ ಮಗುವಿಗೆ ಜನ್ಮ ನೀಡಿದ್ದರು.. ಗೀತಾ ಗಂಡು ಮಗುವಿಗೆ ಜನ್ಮ ನೀಡಿದ ಸಂತಸದ ವಿಚಾರವನ್ನು ಪತಿ ಹರ್ಭಜನ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ’ ಎಂದು ತಿಳಿಸಿದ್ದರು.

ಇದೀಗ ಆ ಮಗುವಿಗೆ ಹರ್ಬಜನ್ ಸಿಂಗ್ ದಂಪತಿ ನಾಮಕರಣ ಮಾಡಿದ್ದುಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಜುಲೈ 26ರಂದು ಮುದ್ದಿನ ಮಗನ ಹೆಸರನ್ನು ಗೀತಾ ಬಸ್ರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಹಾಗಾದ್ರೆ ಆ ಮಗುವಿನ ಹೆಸರು ಏನು ಅಂತೀರಾ?? ಮುಂದೆ ಓದಿ

ಮಗನಿಗೆ ‘ಜೋವನ್ ವೀರ್ ಸಿಂಗ್ ಪ್ಲಾಹಾ’ ಎಂದು ನಾಮಕರಣ ಮಾಡಿದ್ದಾರೆ. ಗೀತಾ ಈ ಹೆಸರನ್ನು ಮೊದಲ ಗರ್ಭಿಣಿಯಾಗಿದ್ದಾಗಲೇ ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಗಂಡು ಮಗುವಾಗುತ್ತೆ ಎಂದು ಈ ಹೆಸರನ್ನು ಆಯ್ಕೆ ಮಾಡಿದ್ದೆ ಎಂದು ಗೀತಾ ಹೇಳಿದ್ದಾರೆ.

“ನಾನು ಹಿನಾಯಾ ಹೊಟ್ಟೆಯಲ್ಲಿ ಇದ್ದಾಗಲೇ ಈ ಹೆಸರನ್ನು ಆಯ್ಕೆ ಮಾಡಿದ್ದೆ. ಆಗ ನಾನು ಗಂಡು ಮಗುವಾಗುತ್ತೆ ಎಂದು ಯೋಚಿಸಿದ್ದೆ. ಆಗ ಹರ್ಭನ್ ಹೆಣ್ಣು ಮಗುವಾದರೆ ಏನು ಮಾಡುತ್ತೀಯಾ, ಹೆಣ್ಣು ಮಗುವಿನ ಹೆಸರನ್ನು ಆಯ್ಕೆ ಮಾಡು ಎಂದಿದ್ದರು. ನಾನು ಗಂಡು ಮಗುನೇ ಆಗೋದು ಎನ್ನುತ್ತಿದೆ. ಆದರೆ ಹೆಣ್ಣು ಮಗುವಾಯಿತು. ಹೆಸರಿಡಲು ಧಾರ್ಮಿಕ ವಿಧಾನವಿದೆ. ಜೆ ಹೆಸರು ಬಂದಿತ್ತು. ಜೋವನ್ ಎನ್ನುವ ಹೆಸರು ಆಯ್ಕೆ ಮಾಡಿದೆ. ಈ ಹೆಸರು ಹಿನಾಯಾ ಹುಟ್ಟಿದಾಗಿನಿಂದ ನನ್ನೊಂದಿಗೆ ಅಂಟಿಕೊಂಡಿತ್ತು” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top