fbpx
ಸಮಾಚಾರ

ಬಿಗ್​ ಬಾಸ್​ ಫೈನಲ್ ವೀಕ್: ದೊಡ್ಮನೆಯಿಂದ ಈ ವಾರ ಮೂರು ಸ್ಪರ್ಧಿಗಳು ಎಲಿಮಿನೇಟ್?

ಬಿಗ್ ಬಾಸ್ ಕನ್ನಡ ಸೀಸನ್ 8ರ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೂಲಗಳ ಪ್ರಕಾರ, ಆಗಸ್ಟ್‌ 8ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಕಳೆದ ಭಾನುವಾರ ಇಬ್ಬರು ಎಲಿಮಿನೇಟ್​ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ವಾರಾಂತ್ಯದ ಬದಲು ಮಿಡ್​ವೀಕ್​ನಲ್ಲಿ ಎಲಿಮಿನೇಷನ್​ ಇರಲಿದೆ ಎಂಬುದು ನಂತರ ತಿಳಿಯಿತು. ಮೊನ್ನೆ ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಡೆದ ಮಿಡ್​ ನೈಟ್ ಎಲಿಮಿನೇಷನ್​ನಲ್ಲಿ ಚಕ್ರವರ್ತಿ ಚಂದ್ರಚೂಡ ಮನೆಯಿಂದ ಹೊರ ಬಂದಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಫಿನಾಲೆ ವಾರಕ್ಕೆ ಐದು ಜನರನ್ನು ಉಳಿಸಿಕೊಳ್ಳಲಾಗುತ್ತದೆ. ಈಗ ಉಳಿದುಕೊಂಡವರು ಎಂಟು ಸ್ಪರ್ಧಿಗಳು. ಹೀಗಾಗಿ, ಈ ವಾರ ಡಬಲ್​ ಎಲಿಮಿನೇಷನ್​ ನಡೆದು, ಮುಂದಿನ ವಾರದ ಆರಂಭದಲ್ಲಿ ಒಬ್ಬರನ್ನು ಎಲಿಮಿನೇಷನ್​ ಮಾಡಬಹುದು ಅಥವಾ ಇದೇ ವಾರದಲ್ಲಿ ಮೂವರು ಎಲಿಮಿನೇಟ್​ ಆಗಬಹುದು. ಹೀಗಾಗಿ, ಏಳು ದಿನಗಳ ಅಂತರದಲ್ಲಿ ಮೂವರು ಎಲಿಮಿನೇಟ್​ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top