fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ – ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರಗಿ

ಬಿಗ್ ಬಾಸ್ ಕನ್ನಡ ಸೀಸನ್ 8ರ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೂಲಗಳ ಪ್ರಕಾರ, ಆಗಸ್ಟ್‌ 8ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಕಳೆದ ಭಾನುವಾರ ಇಬ್ಬರು ಎಲಿಮಿನೇಟ್​ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ವಾರಾಂತ್ಯದ ಬದಲು ಮಿಡ್​ವೀಕ್​ನಲ್ಲಿ ಎಲಿಮಿನೇಷನ್​ ಇರಲಿದೆ ಎಂಬುದು ನಂತರ ತಿಳಿಯಿತು. ಈಗ ಆ ಕ್ಷಣ ಬಂದೇ ಬಿಟ್ಟಿದೆ. ಹಾಗಾಗಿ ಪ್ರಶಾಂತ್​ ಸಂಬರಗಿ ಮತ್ತು ಕೆಲವು ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸದ್ಯ ಮನೆಯಲ್ಲಿದ್ದ 9 ಮಂದಿಯಲ್ಲಿ ಐವರು ನಾಮಿನೇಟ್ ಆಗಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಒಂದು ಫೋನ್​ ಬೂತ್​ ಇಡಲಾಗಿದೆ. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್​ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​ ಅವರು ಫೋನ್​ನಲ್ಲಿ ಮಾತನಾಡಿದರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್​ ಬಾಸ್​ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಪ್ರತಿಯೊಬ್ಬರೂ ಗೇಟ್​ ಬಳಿ ಹೋಗಿ ನಿಲ್ಲಬೇಕು. ಯಾರಿಗೆ ಬಾಗಿಲು ತೆರೆಯುತ್ತದೆಯೋ ಅವರು ಎಲಿಮಿನೇಟ್​ ಆದಂತೆ.

ಫೋನ್ ಬೂತ್‍ನಲ್ಲಿ ಮಾತನಾಡಿ ಬಂದ ಪ್ರಶಾಂತ್ ಸಂಬರಗಿ ಅವರು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಚಿಕ್ಕ ಮಕ್ಕಳಂತೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಕೊನೆಯಲ್ಲಿ ಪ್ರಶಾಂತ್ ಸೇವ್ ಆಗಿ ನಿಟ್ಟಿಸಿರು ಬಿಟ್ಟರು

ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್:
ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಟ್​ ಆದವರನ್ನು ಸುದೀಪ್​ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್​ ಬಾಸ್​ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ವಿಡ್​ವೀಕ್​ ಎಲಿಮಿನೇಷನ್​ ಆದಕಾರಣ ಸುದೀಪ್​ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್​ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top