fbpx
ಸಮಾಚಾರ

ಇತ್ತೀಚಿನ ದಿನಗಳಲ್ಲಿ ರಮ್ಯಾಗೆ ಅತೀ ಹೆಚ್ಚು ಇಷ್ಟವಾದ ಕನ್ನಡ ಹಾಡು ಇದು: ಯಾವುದಾ ಹಾಡು?

ಸಿನಿಮಾದಿಂದ ದೂರಾಗಿ, ಈಗ ರಾಜಕೀಯದಲ್ಲೂ ಗ್ಯಾಪ್‌ ಪಡೆದುಕೊಂಡಿರುವ ರಮ್ಯಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟದ ಫೋಟೋಗಳನ್ನು ಹಂಚಿಕೊಳ್ಳುತ್ತ, ಸೆಲೆಬ್ರಿಟಿ ಸ್ನೇಹಿತರ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.

 

 

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಇಷ್ಟವಾದ ಹಾಡಿನ ಬಗ್ಗೆ ರಮ್ಯಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಹೆಚ್ಚು ಇಷ್ಟಪಟ್ಟ ಹಾಡು ಇದು’ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ರಮ್ಯಾರನ್ನ ಕಾಡಿದ ಆ ಕನ್ನಡ ಯಾವುದು ಅಂತೀರಾ? ಮುಂದೆ ಓದಿ

ಆ ಹಾಡು ಯಾವುದು?
ರಮ್ಯಾ ಮೆಚ್ಚಿನ ಆ ಹಾಡು ‘ನಿನ್ನ ಸನಿಹಕೆ’ ಚಿತ್ರದ ಕವರ್ ಸಾಂಗ್. ಡಾ ರಾಜ್ ಕುಮಾರ್ ಅವರ ಮೊಮ್ಮಗಳು ಮೊದಲ ಸಲ ನಟಿಸುತ್ತಿರುವ ಚಿತ್ರ ‘ನಿನ್ನ ಸನಿಹಕೆ’. ಈ ಸಿನಿಮಾದ ಕವರ್ ವರ್ಷನ್ ಹಾಡೊಂದು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಈ ಹಾಡು ಈಗ ರಮ್ಯಾ ಅವರಿಗೂ ಹೆಚ್ಚು ಇಷ್ಟವಾಗಿದೆ ಆಗಿದೆ. ‘ಪ್ರಸ್ತುತ ನಾನು ಹೆಚ್ಚು ಇಷ್ಟ ಪಟ್ಟ ಹಾಡು ಇದು’ ಎಂದು ಶೇರ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top