fbpx
ಸಮಾಚಾರ

ಐಪಿಎಲ್ ಆರಂಭಕ್ಕೂ ಮೊದಲೇ ಆರ್​ಸಿಬಿಗೆ ದೊಡ್ಡ ಹೊಡೆತ: ಇಡೀ ಟೂರ್ನಿಯಿಂದಲೇ ಸ್ಟಾರ್ ಆಲ್‍ರೌಂಡರ್ ಔಟ್

ಕೊರೊನಾದಿಂದಾಗಿ ಮೂಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ಗೆ ಬಿಸಿಸಿಐ ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಆರ್​ಸಿಬಿ ತಂಡದ ಸ್ಟಾರ್ ಆಲ್‍ರೌಂಡರ್ ಈ ಬಾರಿಯ ಸೆಕೆಂಡ್ ಇನ್ನಿಂಗ್ ಐಪಿಎಲ್‍ನಿಂದ ಹೊರಗುಳಿಯುವುದಾಗಿ ವರದಿಯಾಗಿದೆ.

 

 

ಹೌದು, ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ನಡುವಣ ಅಭ್ಯಾಸ ಪಂದ್ಯದ ವೇಳೆ ಆರ್​ಸಿಬಿ (RCB) ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಗಾಯದ ಪರಿಣಾಮ ಆಗಸ್ಟ್​ನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಸುಂದರ್ ಹೊರಬಿದ್ದಿದ್ದರು. ಇದೀಗ ಆರ್​ಸಿಬಿ ಆಟಗಾರನ ಬೆರಳಿಗೆ ಗಂಭೀರ ಗಾಯವಾಗಿದೆ ಎಂಬ ರಿಪೋರ್ಟ್ ಬಂದಿದೆ. ಈ ಗಾಯವು ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ವೈದ್ಯರ ವರದಿ ತಿಳಿಸಿದೆ.

ಕೈ ಬೆರಳಿನ ಮೂಳೆ ಮುರಿತದ ಸಮಸ್ಯೆ ಎದುರಾಗಿರುವ ಕಾರಣ ಕನಿಷ್ಠ 2-3 ತಿಂಗಳ ವಿಶ್ರಾಂತಿ ಅಗತ್ಯವಿರುವ ಕಾರಣ ಸೆಪ್ಟೆಂಬರ್‌ 17ರಂದು ಆರಂಭವಾಗಲಿರುವ ಐಪಿಎಲ್ 2021 ಟೂರ್ನಿಯ ಎರಡನೇ ಚರಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸೇವೆಗೆ ವಾಂಷಿಂಗ್ಟನ್‌ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು ಚೆನ್ನೈಗೆ ಹಿಂದಿರುಗಲಿದ್ದಾರೆ ಎಂದು ವರದಿಗಳು ಹೇಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top