fbpx
ಸಮಾಚಾರ

ಜೆಡಿಎಸ್ ಪರವಾಗಿ ಅನಂತ್​​​ಕುಮಾರ್​​ ಪುತ್ರಿ ವಿಜೇತಾ ಹೇಳಿಕೆ

ಜೆಡಿಎಸ್​ ಪಕ್ಷವನ್ನ ಹೊಗಳಿ ದಿವಂಗತ ಕೇಂದ್ರ ಸಚಿವ ಅನಂತ್​​​ಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್​​​​ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್​ ಇನ್ನೂ ಸ್ಟ್ರಾಂಗ್​​ ಅಂತಾ ಹೇಳಿದ್ದು, ಈ ಟ್ವೀಟ್​ ತೀವ್ರ ಕುತೂಹಲ ಕೆರಳಿಸಿದೆ.

” ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಇನ್ನೂ ಬಲಿಷ್ಠವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಜೇತ ಟ್ವೀಟ್ ಮಾಡಿದ್ದಾರೆ. ಹಿರಿಯ ಮತ್ತು ಪ್ರಭಾವಿ ಬಿಜೆಪಿ ನಾಯಕರಾಗಿದ್ದ ಅನಂತಕುಮಾರ್ ಅವರ ಪುತ್ರಿಯಾಗಿರುವ ಕಾರಣ ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ

 

 

ಕರ್ನಾಟಕದ ರಾಜಕೀಯ ನಿಜವಾಗಿಯೂ ಆಸಕ್ತಿದಾಯಕವಾಗಿದೆಯೇ.. ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿಯೇ ಇದೆ’ ಎಂದಿದ್ದಾರೆ. ಈ ಒಂದು ಟ್ವಿಟ್ ಹಲವು ಪ್ರಶ್ನೆಗಳಿಗೆ ಆರಂಭ ಒದಗಿಸಿದೆ.

ತಾಯಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಇಂಥ ಟ್ವೀಟ್ ಮಾಡಿದ್ರಾ? ಜೆಡಿಎಸ್ ಕಡೆ ಒಲವು ತೋರಿದರಾ ಎನ್ನುವ ಪ್ರಶ್ನೆಯೂ ಮೂಡಿದೆ. ಇನ್ನೊಂದು ಕಡೆ ಜೆಡಿಎಸ್ ಕಾರ್ಯಕರ್ತರು ಇದನ್ನು ಸ್ವಾಗತ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top