fbpx
ಸಮಾಚಾರ

ಯುವರತ್ನ ನಟಿ ಸಾಯೆಶಾಗೆ ಮಗು ಜನಿಸಿದ ಬಳಿಕ ಗಂಡನಿಂದಾಗಿ ಮುಜುಗರ; ಮಹಿಳೆಗೆ ಮದುವೆಯಾಗುವುದಾಗಿ ವಂಚಿಸಿದ ಆರೋಪ

ಖ್ಯಾತ ತಮಿಳು ನಟ ಆರ್ಯರಿಗೆ ಇತ್ತೀಚೆಗಷ್ಟೇ ತಂದೆ ಸ್ಥಾನಕ್ಕೆ ಬಡ್ತಿ ಪಡೆದ ಖುಷಿ ಜೊತೆಗೆ ‘ಸರಪಟ್ಟ ಪರಂಬರೈ’ ಸಿನಿಮಾ ಯಶಸ್ಸು ಕಂಡ ಸಂಭ್ರಮದಲ್ಲಿದ್ದಾರೆ. ಈ ಎರಡು ಖುಷಿ ವಿಷಯದ ಮಧ್ಯೆ ನಟ ಆರ್ಯ ಮೇಲೆ ಮಹಿಳೆಗೆ ಮದುವೆಯಾಗುವುದಾಗಿ ಹೇಳಿ 70 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ.

ಜರ್ಮನಿ ಮೂಲದ ವಿದ್ಜಾ ಹೆಸರಿನ ಯುವತಿ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅವರು ಹೇಳುವ ಪ್ರಕಾರ, ಆರ್ಯ 70 ಲಕ್ಷ ರೂಪಾಯಿ ತೆಗೆದುಕೊಂಡು ಮದುವೆಯಾಗುವುದಾಗಿ ನಂಬಿಸಿದ್ದರಂತೆ. ಆರ್ಯ ಹಾಗೂ ತಮ್ಮ ನಡುವೆ ನಡೆದ ಚಾಟ್​ನ ಸ್ಕ್ರೀನ್​ ಶಾಟ್​ಗಳನ್ನು ವಿದ್ಜಾ ಪೊಲೀಸರ ಜತೆ ಹಂಚಿಕೊಂಡಿದ್ದಾರೆ.

ಜರ್ಮನಿ ಮೂಲದ ವಕೀಲರ ಸಹಾಯದಿಂದ ಯುವತಿ ದೂರು ದಾಖಲು ಮಾಡಿದ್ದಾರೆ. ಇದು ಕೋರ್ಟ್​ ಮೆಟ್ಟಿಲು ಕೂಡ ಏರಿದ್ದು, ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವಿಚಾರಣೆ ಆಗಸ್ಟ್​ 17ಕ್ಕೆ ನಿಗದಿಯಾಗಿದೆ. ಅಚ್ಚರಿಯ ವಿಚಾರ ಎಂದರೆ, ಆರ್ಯ ಆಗಲಿ ಅವರ ತಂಡವಾಗಲಿ ಈ ದೂರನ್ನು ವಿರೋಧಿಸಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top