fbpx
ಸಮಾಚಾರ

ಜುಲೈ 30: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 30, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಸಪ್ತಮೀ 5:39 am
ನಕ್ಷತ್ರ : ರೇವತಿ 2:02 pm
ಯೋಗ : ಧೃತಿ 8:19 pm
ಕರಣ : ವಿಷ್ಟಿ 4:42 pm ಬಾವ 5:39 am

Time to be Avoided
ರಾಹುಕಾಲ : 10:51 am – 12:26 pm
ಯಮಗಂಡ : 3:34 pm – 5:09 pm
ದುರ್ಮುಹುರ್ತ : 8:39 am – 9:29 am, 12:51 pm – 1:41 pm
ವಿಷ : Nil
ಗುಳಿಕ : 7:42 am – 9:17 am

Good Time to be Used
ಅಮೃತಕಾಲ : 11:26 am – 1:10 pm
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:04 am
ಸುರ್ಯಾಸ್ತಮಯ : 6:47 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಮೀನ upto 14:02

 

 

 

ನಿಮ್ಮ ನಿರೀಕ್ಷೆಯನ್ನು ಮೀರಿ ಹಲವು ಹೊಸತನಗಳನ್ನು ರೂಪಿಸಿಕೊಳ್ಳಲು ಸಕಾಲವಾಗಿದೆ. ಇದಕ್ಕೆ ನಿಮ್ಮ ಬಂಧುಗಳು, ಸ್ನೇಹಿತರು ಸಹಾಯ ಹಸ್ತ ನೀಡುವರು. ಆದರೆ ಅದಕ್ಕಾಗಿ ವಿಶೇಷ ಖರ್ಚು ಮಾಡಬೇಕಾಗುವುದು.

ವಿಶೇಷವಾದದ್ದು ನಿಮಗೆ ಲಭ್ಯವಾಗುವುದು. ಅದಕ್ಕಾಗಿ ನೀವು ಪಟ್ಟ ಅಪಾರವಾದ ಶ್ರಮವು ನಿಮಗೆ ಶುಭಫಲವನ್ನು ಕೊಡುವುದು. ಆದಾಗ್ಯೂ ಈ ವಿಷಯದಲ್ಲಿ ಅಲ್ಪ ಕಿರಿಕಿರಿ ಇರುತ್ತದೆ. ಮುಂದಿನ ದಿನಗಳಲ್ಲಿ ಒಳಿತಾಗುವುದು.

 

ಆಪತ್ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮಗೆ ಸಹಾಯ ಸಹಕಾರ ನೀಡುವವನೇ ನಿಮ್ಮ ನಿಜವಾದ ಮಿತ್ರ ಅಥವಾ ಹಿತೈಷಿ. ಆತನ ಮಾತನ್ನು ಆಲಿಸಿ ಸಂತೋಷ ಅನುಭವಿಸಿ.

ಎಲ್ಲ ರೀತಿಯ ಮಾನಸಿಕ ದುಗುಡಗಳು ನಿಮ್ಮನ್ನು ಆವರಿಸುವುದು ಮತ್ತು ಜೀವನದಲ್ಲಿ ನಿರುತ್ಸಾಹ ಮೂಡುವುದು. ಆದರೆ ಗುರು,ಹಿರಿಯರ ಆಶೀರ್ವಾದ ಪಡೆದಲ್ಲಿ ಮಾನಸಿಕ ದುಗುಡಕ್ಕೆ ಪರಿಹಾರ ಸಿಗುವುದು.

 

ಯಾವ ಕೆಲಸವನ್ನು ಮೊದಲು ಮಾಡಬೇಕು ಎಂದು ಮಾನಸಿಕ ಗೊಂದಲದಲ್ಲಿ ನರಳುವಿರಿ. ಮಾಡಬೇಕಾಗಿರುವ ಕೆಲಸಗಳ ಪಟ್ಟಿ ತಯಾರಿಸಿ. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡುತ್ತಾ ಬನ್ನಿ ಒಳಿತಾಗುವುದು.

 

 

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರು ಉಳಿತಾಯ ಮಾಡಿ.

 

 

ಮುನ್ನುಗ್ಗಿ ಹೋಗುವ ನಿಮ್ಮ ಉತ್ಸುಕತೆಯನ್ನು ವೃದ್ಧಿಸಿಕೊಳ್ಳಿ. ಒಳಿತಾಗುವ ಹೊಸದಾದ ಬಾಗಿಲು ತೆರೆಯಲಿದೆ. ಬರುವ ಉತ್ತಮ ಅವಕಾಶಗಳನ್ನು ನಿರಾಕರಿಸದೆ ಒಪ್ಪಿಕೊಳ್ಳಿ. ಇದರಿಂದ ಒಳಿತಾಗುವುದು.

 

 

ಮಹತ್ವದ ಕೆಲಸವನ್ನು ಮಾಡುವ ಮುನ್ನ ಕುಲದೇವತೆಯನ್ನು ಪ್ರಾರ್ಥಿಸಿ. ಕುಲದೇವರ ಅನುಗ್ರಹದಿಂದ ಒಳಿತಾಗುವುದು. ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಆಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಬಾಳಸಂಗಾತಿಯ ವಿಚಾರದಲ್ಲಿ ಸ್ವಲ್ಪ ಹೆಚ್ಚಿನ ಮುತುವರ್ಜಿ ತೋರಬೇಕಾಗುವುದು. ಇದರಿಂದ ಬರಬಹುದಾದ ಬಿಕ್ಕಟ್ಟುಗಳು ದೂರವಾಗಲಿವೆ. ನೆರೆಹೊರೆಯವರೊಡನೆ ಸ್ನೇಹದಿಂದ ವರ್ತಿಸಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.

 

ಸಣ್ಣದಾದ ಮಾತುಗಳಿಗೆ ರೆಕ್ಕೆ ಪುಕ್ಕ ಸೇರಿ ನಿಮ್ಮ ಮೇಲೆ ಅಪನಂಬಿಕೆ ಉಂಟಾಗುವ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾತುಕತೆಯಲ್ಲಿ ಅನಗತ್ಯ ವಿಚಾರಗಳನ್ನು ಎಳೆದು ತರಬೇಡಿ.

 

ಹೊಸ ಸಾಹಸಕ್ಕೆ ಕೈಹಾಕಲು ಆತ್ಮೀಯರು ಒತ್ತಡ ತರುವ ಸಾಧ್ಯತೆ ಇರುತ್ತದೆ. ನಿಮ್ಮದೇ ಆದ ನಿಲುವನ್ನು ನೀವು ಬಿಟ್ಟು ಕೊಡದಿರಿ. ನಿಮ್ಮ ಇತಿಮಿತಿಗಳನ್ನು ಅರಿತು ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

 

ನಿಮ್ಮ ಬುದ್ಧಿಶಕ್ತಿ ಹಾಗೂ ಸಾಮಾಜಿಕವಾಗಿ ಸ್ಪಂದಿಸುವ ನಿಮ್ಮ ರೀತಿಯಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುವರು. ಎಲ್ಲರೂ ನಿಮ್ಮನ್ನು ಕೊಂಡಾಡುವರು. ವಿಶೇಷವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top