fbpx
ಸಮಾಚಾರ

ಆರೋಗ್ಯವಾಗಿದ್ದೇನೆ: ವದಂತಿಗಳಿಗೆ ತೆರೆ ಎಳೆದ ನಟಿ ಶಕೀಲಾ

ದಕ್ಷಿಣದ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದಂತಹ ಪ್ರೇಕ್ಷಕ ವರ್ಗವನ್ನು ಹೊಂದಿದ್ದ ಕೆಲವೇ ಕೆಲವು ತಾರೆಗಳಲ್ಲಿ ಶಕೀಲಾ ಕೂಡ ಒಬ್ಬರು. ಶಕೀಲಾರನ್ನು ನೆನಪಿಸಿಕೊಂಡರೆ ಪಡ್ಡೆ ಹುಡುಗರ ಹೃದಯದಲ್ಲಿ ಚಿಟ್ಟೆ ಬಿಟ್ಟಂತಾಗುವುದು. 250 ಸಿನಿಮಾಗಳಲ್ಲಿ ಅಭಿನಯಿಸಿರುವ ಶಕೀಲಾ ಕುರಿತು ಗಾಳಿಸುದ್ದಿಯೊಂದು ಹಬ್ಬಿದ್ದು, ಅದಕ್ಕೀಗ ಅವರು ಸ್ಪಷ್ಟನೆ ನೀಡಿದ್ದಾರೆ.

‘ ಶಕೀಲಾ ಮೃತಪಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ಹಾಗೂ ಸೋಶಿಯಲ್​ ಮೀಡಿಯಾಗಳು ವರದಿ ಬಿತ್ತರ ಮಾಡಿದ್ದವು. ಆದರೆ, ಆ ರೀತಿ ಏನೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ. ಕೇರಳದ ಸಾಕಷ್ಟು ಜನರು ನನ್ನ ಆರೋಗ್ಯದ ಬಗ್ಗೆ ಆತಂಕ ಹೊರ ಹಾಕಿದ್ದಾರೆ. ಸಾಕಷ್ಟು ಜನರು ಈ ಬಗ್ಗೆ ಕಾಳಜಿ ತೋರಿದ್ದಾರೆ. ನನಗೆ ಈ ಬಗ್ಗೆ ಸಾಕಷ್ಟು ಕರೆಗಳು ಹಾಗೂ ಮೆಸೇಜ್​ಗಳು ಬಂದಿವೆ. ನಿಮ್ಮ ಪ್ರೀತಿಗೆ ನಾನು ಆಭಾರಿ’ ಎಂದು ಶಕೀಲಾ ಹೇಳಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಶಕೀಲಾ. ನಾನು ಮೃತಪಟ್ಟಿದ್ದೇನೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ನಿನ್ನೆ ಗಮನಕ್ಕೆ ಬಂತು. ಹಾಗೇನೂ ಆಗಿಲ್ಲ. ನಾನಿಲ್ಲಿ ಆರೋಗ್ಯವಾಗಿ ಮತ್ತು ಬಹಳ ಸಂತೋಷದಿಂದ ಇದ್ದೇನೆ. ನನ್ನ ಬಗ್ಗೆ ನೀವೆಲ್ಲ ವಹಿಸಿದ ಕಾಳಜಿಗೆ ಧನ್ಯವಾದಗಳು. ಈ ಕುರಿತು ನನಗೆ ಸಂತಸವಿದೆ. ಯಾರೋ ಕೆಟ್ಟ ಸುದ್ದಿ ಹರಡಿದ್ದರು. ಅದರಿಂದಾಗಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ಆ ಕೆಟ್ಟ ಸುದ್ದಿ ಹಬ್ಬಿಸಿದವರಿಗೂ ಧನ್ಯವಾದ. ಯಾಕೆಂದರೆ ಆ ಮೂಲಕ ನೀವು ನನ್ನತ್ತ ಗಮನಹರಿಸುವಂತೆ ಅವರು ಮಾಡಿದರು. ಮತ್ತೊಮ್ಮೆ ಧನ್ಯವಾದಗಳು’ ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top