fbpx
ಸಮಾಚಾರ

ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಶಾನ್ವಿ ಶ್ರೀವಾಸ್ತವಗೆ ಗಾಯ, ಆಸ್ಪತ್ರೆಗೆ ದಾಖಲು

ನಟಿ ಶಾನ್ವಿ ಶ್ರೀವಾಸ್ತವ ಪ್ರಸ್ತುತ ‘ಬ್ಯಾಂಗ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಡಾರ್ಕ್‌ ಕಾಮಿಡಿ ಪ್ರಕಾರದಲ್ಲಿ ‘ಬ್ಯಾಂಗ್‌’ ಸಿನಿಮಾ ಮೂಡಿಬರಲಿದ್ದು, ಶಾನ್ವಿ ಅವರೇ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಶಾನ್ವಿಗೆ ಪೆಟ್ಟಾಗಿದೆ. ಫೈಟ್ ಮಾಡುವಾಗ ಆಯತಪ್ಪಿ ಜಾರಿಬಿದ್ದಿದ್ದರಿಂದ ಅವರ ಕೈಗೆ ಪೆಟ್ಟು ಬಿದ್ದಿದೆ.

ಬ್ಯಾಂಗ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಗ್ಯಾಂಗ್‍ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರ ಆ್ಯಕ್ಷನ್ ದೃಶ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದರು. ಹೀಗಿದ್ದರೂ ಚಿತ್ರೀಕರಣದ ವೇಳೆ ಮಳೆಯ ಎಫೆಕ್ಟ್ ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಶ್ರೀವಾಸ್ತವ್ ಕಾಲು ಜಾರಿ ಬಿದ್ದು ಕೈಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಚಿತ್ರಕ್ಕೆ ಶ್ರೀಗಣೇಶ್‌ ಪರಶುರಾಮ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಗಾಯಕ ರಘು ದೀಕ್ಷಿತ್ ಡಾನ್ ಆಗಿ ‘ಬ್ಯಾಂಗ್‌’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತ್ವಿಕ್ ಮುರಳೀಧರ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಒಂದು ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆಯುತ್ತಿದ್ದಾರೆ. ಸಾಹಸ ನಿರ್ದೇಶನವನ್ನು ಚೇತನ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top