fbpx
ಸಮಾಚಾರ

ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್​​​ಗೆ ಮಂಜು ಪಾವಗಡ ಸಂದೇಶ

ಬಿಗ್ ಬಾಸ್​ ಮನೆಯಲ್ಲಿ ಮಂಜು ಸಿಕ್ಕಿರುವ ಒಂದು ಅವಕಾಶವನ್ನು ಬಳಸಿಕೊಂಡು ಬಿಗ್ ಬಾಸ್​ ಬಳಿ ತಮ್ಮ ಆಸೆ ಏನೆಂದು ಹೇಳಿಕೊಂಡಿದ್ದಾರೆ. ಆದರೆ ಈ ಆಸೆ ಈಡೇರಲೂಬಹುದು ಅಥವಾ ಈಡೇರದೆಯೂ ಇರಬಹುದು. ಆದರೆ ಮಂಜು ಪಾವಗಡ ಅವರ ಆಸೆ ಅವರ ಈ ಫಿನಾಲೆ ಜರ್ನಿಗೆ ತುಂಬಾ ಸಹಕಾರಿಯಾಗಿದೆ ಅನ್ನೋದಂತೂ ಸತ್ಯ.

ಬಿಗ್‍ಬಾಸ್ ಮನೆಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಲ್ಯಾಗ್ ಮಂಜುಗೆ ಸ್ಯಾಂಡಲ್‍ವುಡ್ ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಎಂದರೆ ಬಹಳ ಇಷ್ಟ. ಶಿವಣ್ಣನ ಬಿಗ್ ಫ್ಯಾನ್ ಆಗಿರುವ ಮಂಜು ಬಿಗ್‍ಬಾಸ್ ಮನೆಯ ಕ್ಯಾಮೆರಾ ಮುಂದೆ ನಿಂತು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಬಿಗ್‍ಬಾಸ್ ನನಗೆ ಶಿವಣ್ಣ ಅಂದರೆ ಬಹಳ ಇಷ್ಟ. ನಾನು ಈ ವಾರ ಫಿನಾಲೆಯಲ್ಲಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಹಾಗಾಗಿ ಶಿವಣ್ಣ ಕಡೆಯಿಂದ ಒಂದೇ ಒಂದು ಚಿಕ್ಕ ಆಶೀರ್ವಾದ ಬೇಕಾಗಿತ್ತು. ಒಂದೇ ಮಾತಿನಲ್ಲಿ, ಒಂದೇ ಒಂದು ಸಣ್ಣ ವೀಡಿಯೋ ಸಿಕ್ಕಿದರೆ, ನನಗೆ ತುಂಬಾ ಖುಷಿಯಾಗುತ್ತದೆ. ಇದೊಂದೇ ಒಂದು ಆಸೆ ಇದೆ, ದಯವಿಟ್ಟು ಇದೊಂದು ಬೇಡಿಕೆಯನ್ನು ನೇರವೇರಿಸಿ ಕೊಡಿ ಬಿಗ್‍ಬಾಸ್ ಎಂದು ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top