fbpx
ಸಮಾಚಾರ

ಮದುವೆ ಯಾವಾಗ? ಸುದೀಪ್​ ಮುಂದೆ ಗುಟ್ಟು ಬಿಚ್ಚಿಟ್ಟ ನಟಿ ಶುಭಾ ಪೂಂಜಾ

ಶುಭಾ ಪೂಂಜಾ ಶನಿವಾರದಂದು ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಆದರೆ ಶುಭಾ ಪೂಂಜಾ ಅವರು ಸೂಪರ್ ಸಂಡೆ ವಿಥ್ ಸುದೀಪ್​ ಸಂಚಿಕೆಯಲ್ಲಿ ಕಿಚ್ಚನ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಮದುವೆ ವಿಚಾರಗಳ ಬಗ್ಗ್ಗೆ ಕೂಡ ಮಾತನಾಡಿದ್ದಾರೆ.

‘ಆಗಸ್ಟ್​ 5 ನನ್ನ ಜನ್ಮದಿನ. ಹೀಗಾಗಿ, ಸುಮಂತ್​ ಜತೆ ನಾನು ಹೊರಗೆ ಹೋಗುತ್ತೇನೆ. ಅಲ್ಲಿ ತಿಂದುಂಡು ಫಿನಾಲೆಗೆ ಬರುತ್ತೇನೆ’ ಎಂದರು. ನಂತರ ಮುಂದುವರಿಸಿ, ‘ಶೀಘ್ರವೇ ನಾನು ಮದುವೆ ಆಗುತ್ತೇನೆ. ಫಿಯಾನ್ಸೆ 6 ತಿಂಗಳು ಕಾದಿದ್ದಾರೆ. ಅವರೇ ನನಗೆ ಬಿಗ್​ ಬಾಸ್​ ಹೋಗು ಎಂದಿದ್ದು. ಮತ್ತೆ ಅವರನ್ನು ಕಾಯಿಸಲ್ಲ’ ಎಂದು ಹೇಳುವ ಮೂಲಕ ಶೀಘ್ರವೇ ಮದುವೆ ಆಗುತ್ತೇನೆ ಎನ್ನುವ ಸೂಚನೆಯನ್ನು ಶುಭಾ ನೀಡಿದ್ದಾರೆ.

ಅಂದಹಾಗೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶುಭ ಪೂಂಜಾ ಮದುವೆ ಮೊದಲೇ ನಡೆಯಬೇಕಿತ್ತು. ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಜೂನ್​ ತಿಂಗಳಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್​ ಕಾಣಿಸಿಕೊಂಡಿದ್ದರಿಂದ ಎಂಟನೇ ಸೀಸನ್​ ಅರ್ಧಕ್ಕೆ ನಿಂತಿತ್ತು. ಮತ್ತೆ ಸೆಕೆಂಡ್​ ಇನ್ನಿಂಗ್ಸ್​ ಕೂಡ ಆರಂಭವಾಯಿತು. ಈ ಎಲ್ಲಾ ಕಾರಣಕ್ಕಾಗಿ ಬಿಗ್​ ಬಾಸ್​ ಮನೆಯಲ್ಲಿದ್ದ ಶುಭಾ ಪೂಂಜಾ ಮದುವೆ ವಿಳಂಬವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top