fbpx
ಸಮಾಚಾರ

ಆಗಸ್ಟ್ 05: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 5, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಾದಶೀ 5:08 pm
ನಕ್ಷತ್ರ : ಆರುಧ್ರ Full Night
ಯೋಗ : ಹರ್ಷನ 1:14 am
ಕರಣ : ತೈತುಲ 5:08 pm ಗರಿಜ 5:52 am

Time to be Avoided
ರಾಹುಕಾಲ : 1:59 pm – 3:33 pm
ಯಮಗಂಡ : 6:09 am – 7:43 am
ದುರ್ಮುಹುರ್ತ : 10:20 am – 11:10 am, 3:21 pm – 4:11 pm
ವಿಷ : 1:35 pm – 3:20 pm
ಗುಳಿಕ : 9:17 am – 10:51 am

Good Time to be Used
ಅಮೃತಕಾಲ : 7:42 pm – 9:27 pm
ಅಭಿಜಿತ್ : 12:00 pm – 12:50 pm

Other Data
ಸೂರ್ಯೋದಯ : 6:05 am
ಸುರ್ಯಾಸ್ತಮಯ : 6:45 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಮಿಥುನ

 

 

 

 

ಸರಿಕಂಡದ್ದನ್ನು ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಿರಿ. ಇದರಿಂದ ವಿರೋಧಿಗಳು ಹಿಮ್ಮೆಟ್ಟುವರು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು. ಆರ್ಥಿಕ ಸಮಸ್ಯೆಬರುವುದಿಲ್ಲ.

ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವಿರಿ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವವು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು.

 

ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ನಿಮ್ಮನ್ನು ಕೆರಳಿಸುವ ಪ್ರಚೋದಿಸುವ ಹಲವು ವಿದ್ಯಮಾನಗಳು ನಡೆಯಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನಿದ್ದು ಬಿಡಿ.

ಮಾನಸಿಕವಾಗಿ ಸಣ್ಣಪುಟ್ಟ ಕಿರಿಕಿರಿಗಳು ಕಾಡುವ ಸಾಧ್ಯತೆ ಇವೆ. ವಾಹನ ಚಾಲನೆ ವೇಳೆ ರಸ್ತೆ ಕಡೆಗೆ ನಿಗಾ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಆಹಾರ, ವಿಹಾರದಲ್ಲಿ ಎಚ್ಚರ ಇರಲಿ. ಕೆಲವರಿಗೆ ಉದರಶೂಲೆ ಕಾಡುವ ಸಾಧ್ಯತೆ ಇದೆ.

 

ನೀವು ನಿರೀಕ್ಷೆ ಮಾಡುತ್ತಿರುವುದು ಒಂದು. ಆದರೆ ಕಾರ್ಯ ಸಾಧುವಾಗುತ್ತಿರುವುದು ಮತ್ತೊಂದು. ಆದಾಗ್ಯೂ ಈ ಬಗ್ಗೆ ಚಿಂತಿಸದಿರುವುದೇ ಒಳ್ಳೆಯದು. ಯಾವ ಕಾಲಕ್ಕೆ ಏನು ಕೊಡಬೇಕು ಎಂಬುದು ಭಗವಂತನಿಗೆ ಚೆನ್ನಾಗಿ ಅರಿವಿದೆ.

 

 

ನೆರೆಹೊರೆಯವರು ಹೊರೆಯಾಗುವಂತಹ ಸನ್ನಿವೇಶದ ಸಾಧ್ಯತೆಗಳು ಅಧಿಕ. ಆದರೆ ನೀವು ನಿಮ್ಮತನ ಕಾಪಾಡಿಕೊಳ್ಳುವುದು ಒಳಿತು. ಮನೋಬಯಕೆಗಳು ಪೂರ್ಣಗೊಳ್ಳುವವು.

 

 

ಯಾವಾಗಲು ಕೆಟ್ಟದೇ ಅಗುವುದಿಲ್ಲ. ಹಾಗಾಗಿ ಸದಾ ಋುಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ. ಇಂದಿನ ಕಾರ್ಯವು ದೈವದ ಸಹಾಯದಿಂದ ಪೂರ್ಣಗೊಳ್ಳುವವು.

 

 

ತಿಳಿಯದೆ ತಪ್ಪು ಮಾಡಿದರೆ ಕ್ಷ ಮೆ ನೀಡಬಹುದು. ಆದರೆ ತಿಳಿದೂ ತಿಳಿದು ತಪ್ಪು ಮಾಡಿದರೆ ಯಾರೂ ಕ್ಷ ಮಿಸುವುದಿಲ್ಲ. ಹಿಂದೆ ಮಾಡಿದ ತಪ್ಪನ್ನೇ ಮಾಡಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುವುದು. ಈ ಬಗ್ಗೆ ಎಚ್ಚರಿಕೆ ಇರಲಿ.

 

ನಿಮ್ಮ ದಾರಿಯಲ್ಲಿ ನೀವು ಬಯಸಿದ ರೀತಿಯಲ್ಲಿ ನೇರವಾದ ಮಾರ್ಗ ದೊರೆಯದೆ ಹೋಗುವ ಸಾಧ್ಯತೆ ಇದೆ. ಆದರೂ ಪರವಾಗಿಲ್ಲ, ಕೂತು ಮಲಗುವವನಿಗೆ ಹೆಚ್ಚು ಪೆಟ್ಟಾಗುವುದಿಲ್ಲ. ಸಾವಧಾನದಿಂದ ಇರಿ.

 

ಮನೆಯಲ್ಲಿ ಸಂಗಾತಿ ಮತ್ತು ಮಕ್ಕಳ ಜತೆಯಲ್ಲಿ ಹೊಂದಾಣಿಕೆ ಮನೋಭಾವ ಇರಲಿ. ಇಲ್ಲದೆ ಇದ್ದಲ್ಲಿ ಎತ್ತು ಏರಿಗೆ ಎಮ್ಮೆ ನೀರಿಗೆ ಎಂದು ಹಗ್ಗ ಜಗ್ಗಾಟವಾಗುವುದು. ಕೆಲವು ವಿಚಾರಗಳಲ್ಲಿ ಸೋತು ಗೆಲ್ಲುವುದು ಒಳ್ಳೆಯದು.

 

ಸಮುದ್ರದ ನೆಂಟಸ್ಥನ ಉಪ್ಪಿಗೆ ಬಡತನ ಎನ್ನುವಂತೆ ನಿಮ್ಮಲ್ಲಿ ಎಲ್ಲಾ ಬುದ್ಧಿವಂತಿಕೆ ಇದ್ದರೂ ಅದು ನಿಜ ಜೀವನದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ ಎಂಬುದೇ ನಿಮ್ಮ ಸಮಸ್ಯೆ ಆಗಿದೆ. ಕತ್ತಲು ಕಳೆದು ಬೆಳಕಾಗಲೇಬೇಕು. ಸ್ವಲ್ಪ ತಾಳ್ಮೆಯಿಂದಿರಿ.

 

ಕೆಲವು ಸಂದರ್ಭದಲ್ಲಿ ಮಾತನಾಡಲೇ ಬೇಕಾಗುತ್ತದೆ. ಅಂತಹ ಸಮಯದಲ್ಲೂ ಮೌನ ವಹಿಸಿದಲ್ಲಿ ಅದರಿಂದ ವೈಯಕ್ತಿಕ ತೊಂದರೆ ಎದುರಾಗುವುದು. ಆದ್ದರಿಂದ ಸಮಯಕ್ಕೆ ಸೂಕ್ತ ಮಾತಿನ ವರಸೆ ಬಳಸುವುದು ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top