fbpx
ಸಮಾಚಾರ

ಲೀಲಾವತಿ ಮತ್ತು ನಟ ವಿನೋದ್ ರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಓರ್ವ ಬಂಧನ

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಪುತ್ರ, ನಟ ವಿನೋದ್​ ರಾಜ್​ಕುಮಾರ್​​​ ತಮ್ಮ ಬಗೆಗಿನ ಅವಹೇಳನಕಾರಿ ಪೋಸ್ಟ್​​ ವಿರುದ್ಧ ಸೈಬರ್​​ ಕ್ರೈಂ ಠಾಣೆಗೆ ಭೇಟಿ ನೀಡಿದರು. ಕಳೆದ 8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿದಾಡಿತ್ತು. ಈ ಕುರಿತು ವಿನೋದ್​ ರಾಜ್​ಕುಮಾರ್​​ ಉತ್ತರ CEN ರಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಪೊಲೀಸರು ನನ್ನ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆ ಸಂಬಂಧ ಇಂದು ಕರೆದಿದ್ದರು. ತನಿಖೆಗೆ ನಾನು ಸಹಕರಿಸಿದ್ದೇನೆ. ನೋಡೋಣ ತಪ್ಪಿತಸ್ಥರಿಗೆ ಶಿಕ್ಷಯಾಗಲಿದೆ. ಈ ರೀತಿಯ ಕೃತ್ಯಗಳು ಕಲಾವಿದರಿಗಾಗಲಿ, ಸಾಮಾನ್ಯರಿಗಾಗಲಿ ಆಗಬಾರದು. ಯುವಕರು ಕೆಟ್ಡ ಮನಸ್ಥಿತಿಯಿಂದ ಹೊರಬರಬೇಕು ಎಂದು ನಟ ವಿನೋದ್ ರಾಜ್ ಹೇಳಿದರು.

”ನಮಗೆ ಈ ಪೇಸ್ ಬುಕ್, ವಾಟ್ಸಾಪ್ ಎಲ್ಲ ಅಷ್ಟೊಂದು ಗೊತ್ತಿಲ್ಲ. ನಾನು ಫೇಸ್ ಬುಕ್ ಬಳಸುವುದೂ ಇಲ್ಲ. ಸ್ನೇಹಿತರು ಹೇಳಿದಾಗ ಗೊತ್ತಾಯಿತು. ಅದರಲ್ಲಿ ಹಲವು ಅಶ್ಲೀಲ ಚಿತ್ರಗಳಿವೆ. ಬೇರೆಯವರಿಗೆ ನನ್ನ ಮುಖ ಹಾಕಿದ್ದಾರೆ. ಮನಸ್ಸಿಗೆ ತುಂಬಾ ನೋವಾಯಿತು. ಹೀಗಾಗಿ ಸೈಬರ್ ಕ್ರೈಮ್‌ಗೆ ಕಂಪ್ಲೇಂಟ್ ಕೊಟ್ಟಿದ್ವಿ. ತನಿಖೆ ಮಾಡುತ್ತಿದ್ದಾರೆ ಎಂದು ವಿನೋದ್ ರಾಜ್ ತಿಳಿಸಿದರು.

ಜೊತೆಗೆ, ”ನಾವು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮ್ಮ ಮರ್ಯಾದೆ ಕಳೆಯೋಕೆ ಹೀಗೆ ಮಾಡುತ್ತಿದ್ದಾರೆ. ನಮ್ಮ ತಾಯಿಗೆ ಅನಾರೋಗ್ಯ ಕಾಡುತ್ತಿದೆ. ಅವರಿಗೆ ನಡೆಯೋಕೆ ಕಷ್ಟ ಆಗುತ್ತಿದೆ. ಈ ಮಧ್ಯೆ ಹೀಗಾಗುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ” ಎಂದು ವಿನೋದ್ ರಾಜ್ ತಮ್ಮ ನೋವು ತೋಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top