fbpx
ಸಮಾಚಾರ

ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದುಕೊಟ್ಟ ಕುಸ್ತಿಪಟು ರವಿ ಕುಮಾರ್!

57 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಉಗುವೆವ್ ವಿರುದ್ಧ ರವಿ ಕುಮಾರ್ ಸೋಲನುಭವಿಸಿದರು.

ಗುರುವಾರ ನಡೆದ ಫೈನಲ್‌ನಲ್ಲಿ ಭಾರತೀಯ ಕುಸ್ತಿಪಟು ರವಿ ಕುಮಾರ್‌ 4-7 ಅಂತರದಲ್ಲಿ ರಷ್ಯಾದ ಕುಸ್ತಿಪಟು ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಕೂಡ ಆಗಿರುವ ಝವುರ್ ಉಗುಯೆವ್‌ ಎದುರು ಜಿದ್ದಾಜಿದ್ದಿನ ಪೈಪೋಟಿಯಲ್ಲಿ ನಿರಾಶೆ ಅನುಭವಿಸಿದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್‌ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಈಗ 23 ವರ್ಷದ ಯುವ ಜಟ್ಟಿ ರವಿ ಕುಮಾರ್‌ ಈ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ತಾವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಪ್ರಯತ್ನದಲ್ಲೇ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top