fbpx
ಸಮಾಚಾರ

ಬಿಗ್‍ಬಾಸ್ ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ ದಿವ್ಯಾ ಸುರೇಶ್

ಬಿಗ್‍ಬಾಸ್ ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿರುವ ಸ್ಪರ್ಧಿಗಳ ಸಂಖ್ಯೆಯು ಎಲಿಮಿನೇಷನ್ ಮೂಲಕವಾಗಿ ಅಷ್ಟೇ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸ್ಪರ್ಧೆ ಇನ್ನಷ್ಟು ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆಗೂ ಮುನ್ನ ಕಟ್ಟಕಡೆಯ ಎಲಿಮಿನೇಷನ್‍ನ ನಡೆದಿದ್ದು ದಿವ್ಯ ಸುರೇಶ್ ಎಲಿಮಿನೇಟ್ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ವೈಷ್ಣವಿ ಇದ್ದರು. ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದರು. ಅಂದಹಾಗೆ, ಈ ವಾರದ ಮಧ್ಯದಲ್ಲಿ (ಬುಧವಾರ) ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿದ್ದಾರೆ.

ಕಳೆದ ವಾರದ ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್​ ವಾರದ ಮಧ್ಯದಲ್ಲಿ ಎಲಿಮಿನೇಟ್​ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್​ ಬ್ರೋ ಗೌಡ ಎಲಿಮಿನೇಟ್​ ಆಗಿದ್ದಾರೆ.

ಫಿನಾಲೆಯಲ್ಲಿ ಉಳಿದುಕೊಳ್ಳೋದು ಐದು ಸ್ಪರ್ಧಿಗಳು. ಪ್ರತಿ ವರ್ಷವೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿ ಫಿನಾಲೆ ವೀಕ್​ ಬಂದರೂ ಆರು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಕಾರಣಕ್ಕೆ ಒಬ್ಬರು ಫಿನಾಲೆ ವಾರ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್​ ಹೇಳಿದ್ದರು. ಅಂತೆಯೇ ಬುಧವಾರದ ಎಪಿಸೋಡ್​​ನಲ್ಲಿ​ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಮೊದಲು ಅರವಿಂದ್​ ಸೇವ್​ ಆದರೆ, ನಂತರ ವೈಷ್ಣವಿ, ಮಂಜು, ದಿವ್ಯಾ ಉರುಡುಗ ಸೇವ್​ ಆದರು.

ಇನ್ನು, ಆರಂಭದ ದಿನಗಳಿಂದಲೂ ದಿವ್ಯಾ ಸುರೇಶ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿಯೇ ಸಾಗಿಬಂದರು. ಟಾಸ್ಕ್‌ ವಿಚಾರದಲ್ಲಿ ಯಾವಾಗಲೂ ಮುಂದೆ ಇರುತ್ತಿದ್ದರು. ಜೊತೆಗೆ ಒಮ್ಮೆ ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ, ಕ್ಯಾಪ್ಟನ್ ಆಗಿದ್ದಾಗ ಕೊಂಚ ನರ್ವಸ್ ಆಗಿ ಭಯಪಟ್ಟಿದ್ದರು. ಜೊತೆಗೆ ಪ್ರಿಯಾಂಕಾ ಮನೆಯಿಂದ ಹೊರಬಿದ್ದ ಮೇಲೆ ಅವರಿಗೆ ತಾವು ಒಂಟಿ ಎಂಬ ಫೀಲಿಂಗ್ ಕೂಡ ಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top