fbpx
ಸಮಾಚಾರ

41 ವರ್ಷಗಳ ಬಳಿಕ ಇತಿಹಾಸ ಬರೆದ ಭಾರತ: ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ

ಬರೊಬ್ಬರಿ 4 ದಶಕಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಇತಿಹಾಸ ನಿರ್ಮಿಸಿದ್ದು, 41 ವರ್ಷಗಳ ಬಳಿಕ ಭಾರತಕ್ಕೆ ಪದಕ ತಂದಿದೆ. ಹೌದು.. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ವಿಭಾಗದಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದ್ದು, ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.

1980ರ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಭಾರತ ಪದಕ ಪಡೆದುಕೊಂಡಿತ್ತು. ಅಂದು ವಾಸುದೇವನ್ ಭಾಸ್ಕರ್ ನಾಯಕತ್ವದಲ್ಲಿ ಆಡಿದ್ದ ಟೀಂ ಇಂಡಿಯಾ ಚಿನ್ನಕ್ಕೆ ಮುತ್ತಿಕ್ಕಿತ್ತು. ಇಂದು ಜರ್ಮನಿ ತಂಡವನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಎರಡನೇ ಕ್ವಾರ್ಟರ್ ನಲ್ಲಿ 3-1 ಹಿನ್ನಡೆಯಲ್ಲಿದ್ದ ಆಕ್ರಮಣಕಾರಿ ಗೋಲ್ ಗಳ ಮೂಲಕ ಆಟದ ಗತಿಯನ್ನು ಬದಲಿಸಿತು. ಸತತ 4 ಗೋಲ್ ಮಾಡುವ ಮೂಲಕ ಜರ್ಮನಿ ತಂಡವನ್ನು ಒತ್ತಡದಲ್ಲಿ ಸಿಲುಕುವಂತೆ ಮಾಡಿತು. ಭಾರತದ ಸಿಮ್ರನ್‍ಜಿತ್ ಸಿಂಗ್ 17ನೇ, 34ನೇ ಮತ್ತು ಹಾರ್ದಿಕ್ ಸಿಂಗ್ 27 ಹಾಗೂ ಹರ್ಮನ್‍ಪ್ರೀತ್ ಸಿಂಗ್ 29ನೇ, ರೂಪಿಂದರ್ ಸಿಂಗ್ 31ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

ಇನ್ನು ಮೂರನೇ ಕ್ವಾರ್ಟರ್ ನಲ್ಲಿ ಅರ್ಧ ಸಮಯದ ಅಂತ್ಯಕ್ಕೆ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಪಡೆದ ರವೀಂದ್ರ ಪಾಲ್ ಗೋಲ್ ಮಾಡಿ 4-3ರ ಮುನ್ನಡೆ ತಂದರು. ಇದಾದ ಮೂರು ನಿಮಿಷದ ಬಳಿಕ ಸಿಮ್ರನ್‍ಜಿತ್ ಗೋಲ್ ಮಾಡಿ 5-3ರ ಮುನ್ನಡೆ ಕಾಯ್ದುಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top