fbpx
ಸಮಾಚಾರ

ಕರ್ನಾಟಕದ ವಿರುದ್ಧ ಕ್ಯಾತೆ ತೆಗೆಯುತ್ತಿರುವ ‘ನಕಲಿ ಸಿಂಗಂ’ ಅಣ್ಣಾಮಲೈಗೆ ಉಗಿದು ಉಪ್ಪಾಕಿದ ಸಂಸದ ಜಿಸಿ ಚಂದ್ರಶೇಖರ್

ತನ್ನ ರಾಜಕೀಯ ಲಾಭಕ್ಕಾಗಿ ಕರ್ನಾಟಕದ ವಿರುದ್ಧ ಕಾಲು ಕೆರೆದು ಕ್ಯಾತೆ ತೆಗೆಯುತ್ತಿರುವಾತ ಮಾಜಿ ಐಪಿಎಸ್ ಅಧಿಕಾರಿ ಹಾಲಿ ರಾಜಕಾರಣಿ ಅಣ್ಣಾಮಲೈ. ಸಿಂಗಂ, ದಕ್ಷ ಅಧಿಕಾರಿ, ದುಷ್ಟರ ಸಿಂಹ ಸ್ವಪ್ನ ಎಂಬಂತ ಬಿರುದು ಬಾವಲಿಗಳನ್ನ ನೀಡಿದ ಕರ್ನಾಟಕದ ವಿರುದ್ಧವೇ ನಕಲಿ ಸಿಂಗ ಅಣ್ಣಾಮಲೈ ತೊಡೆತಟ್ಟಿ ನಿಂತಿರುವಂತೆ. ಯಾಕೆಂದರೆ ಕರ್ನಾಟಕದ ಮಹತ್ವಾಕಾಂಶೆ ಯೋಜನೆಯಾದ ಮೇಕೆದಾಟು ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಣ್ಣಾಮಲೈ.

ಹೌದು, ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯ ನಿರ್ಮಿಸುವ ಯೋಜನೆ ವಿರೋಧಿಸಿ ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಗುರುವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸಿದೆ. ಐದು ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರಾರಂಭಿಸಲುದ್ದೇಶಿಸಿರುವ ಮೇಕೆದಾಟು ಯೋಜನೆ ವಿರುದ್ಧ ಧರಣಿ ಕೂತಿರುವ ಅಣ್ಣಾಮಲೈಗೆ ಕನ್ನಡಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಇದೀಗ ಅಣ್ಣಾಮಲೈ ವಿರುದ್ಧ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

 

 

ಈ ವಿಚಾರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್ ಅವರು ಅಣ್ಣಾಮಲೈ ನಡೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. “ಈ ಮಾಜಿ ಐಪಿಎಸ್ ಅಧಿಕಾರಿಯ ಮಾತು ಕೇಳುತ್ತಿದ್ದರೆ ಈತನ ಮಾನಸಿಕ,ಬೌದ್ಧಿಕ ಮಟ್ಟ ಹಾಗು ವಿಷಯಗಳ ಬಗೆಗಿನ ಪೂರ್ವಗ್ರಹ ಪೀಡಿತ ಜ್ಞಾನ ಎಷ್ಟಿದೆ ಎಂದು ತಿಳಿಯುತ್ತದೆ, ಸದಾ ಕಾವೇರಿ ವಿಷಯದಲ್ಲಿ ತಕರಾರು ರಾಜಕೀಯವನ್ನು ಬಿಟ್ಟು ಬೇರೆ ದಾರಿಯನ್ನು ಆಯ್ಕೆಮಾಡಿ 2 ರಾಜ್ಯಗಳ ನಡುವೆ ಸೌಹಾರ್ದತೆ ಕಾಯ್ದಿದ್ದರೆ ಈತನನ್ನು ಭಿನ್ನ ಎಂದು ಮೆಚ್ಚಬಹುದಿತ್ತು” ಎಂದು ಜಿಸಿ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಾರೆ.

ಮುಂದುವರೆದು, “ತಮಿಳುನಾಡು ಕಾವೇರಿ ಉಪನದಿ ಭವಾನಿಯಲ್ಲಿ ಹಾಗು ಎರಡೆರಡು ವಿದ್ಯುತ್ ಯೋಜನೆ ಜಾರಿಗೆ ತಂದಾಗ ಎಲ್ಲಿದ್ದ ಈತ ? ಸಿಂಗಂ, ಚಿರತೆ, ಹುಲಿ ಎಂದು ಅನಾವಶ್ಯಕ ಬಿಲ್ಡ್ ಅಪ್ ಕೊಟ್ಟು ಅದು ತಲೆಗೇರಿದೆ ಎಂದೆನಿಸುತ್ತದೆ, ಈತನ ವರ್ತನೆಗೆ ಸೊಪ್ಪು ಹಾಕದೆ ಇರುವುದೇ ಲೇಸು ಈತ ಕಾವೇರಿಯನ್ನೇ ರಾಜಕೀಯ ಮಾಡಿಕೊಳ್ಳುವ ಮತ್ತೋರ್ವ. ” ಎಂದು ಕೂಡ ಜಿಸಿ ಚಂದ್ರಶೇಖರ್ ಅಣ್ಣಾಮಲೈ ವಿರುದ್ಧ ಹರಿಹಾಯ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top