fbpx
ಸಮಾಚಾರ

ಬಿಗ್​ ಬಾಸ್​ ಸ್ಪರ್ಧಿಗೆ ಒಬ್ಬರು ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು ಗೊತ್ತಾ?

ಕನ್ನಡ ಬಿಗ್ ಬಾಸ್ ನ ಎಂಟನೇ ಸೀಸನ್ ಕಡೆ ಹಂತ ತಲುಪಿದೆ. ಇದೆ ವಾರಾಂತ್ಯ ಗ್ರಾಂಡ್ ಫಿನಾಲೆ ನಡೆಯಲಿದ್ದು ಈ ಸೀಸನ್ ನ ವಿನ್ನರ್ ಯಾರೆಂದು ತಿಳಿಯಲಿದೆ.. ಬಿಗ್ ಬಾಸ್ ಟ್ರೋಪಿಗಾಗಿ ಐದು ಸ್ಪರ್ದಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಯಾರಿಗೆ ಹೆಚ್ಚು ವೋಟ್ ಬೀಳುತ್ತದೆಯೇ ಅವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ..

ಹಾಗಾದರೆ, ವ್ಯಕ್ತಿ ಒಬ್ಬರು ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಒಂದು ಖಾತೆಯಿಂದ ಓರ್ವ ವ್ಯಕ್ತಿ ಒಂದು ದಿನಕ್ಕೆ 99 ವೋಟ್​ ಚಲಾಯಿಸಬಹುದು. ಹಾಗಂತ ಒಂದೇ ವ್ಯಕ್ತಿಗೆ 99 ಮತಗಳನ್ನು ಹಾಕಬೇಕು ಎನ್ನುವ ನಿಯಮವಿಲ್ಲ. ನಿಮ್ಮಿಷ್ಟದ ಯಾವುದೇ ಸ್ಪರ್ಧಿಗೆ ನೀವು ಮತ ಹಾಕಬಹುದು. ಆದರೆ, 99ಕ್ಕಿಂತ ಹೆಚ್ಚಿನ ಮತ ಹಾಕಲು ಸಾಧ್ಯವಿಲ್ಲ.

ಅಂದಹಾಗೆ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಅತಿ ಹೆಚ್ಚು ವೋಟ್​ ಪಡೆದವರು ಗೆಲ್ಲುತ್ತಾರೆ. ಇವರಲ್ಲಿ ಗೆಲ್ಲೋದು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top