fbpx
ಸಮಾಚಾರ

ಕುಡಿದು ಬಂದು ಎದೆ ಮುಟ್ಟಿದ ಮಾವ: ಮಾವನ ಕಾಮಪುರಾಣ ಬಿಚ್ಚಿಟ್ಟ ಗಾಯಕ ಯೋ ಯೋ ಹನಿಸಿಂಗ್ ಪತ್ನಿ; ದೂರು ದಾಖಲು

ಗಾಯಕ ಯೋ ಯೋ ಹನಿ ಸಿಂಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇವರ ದಾಂಪತ್ಯ ಕಲಹ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಹನಿಸಿಂಗ್ ಪತ್ನಿ ಶಾಲಿನಿ ತಲ್ವಾರ್ ಕೌಂಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಸಿಂಗ್ ವಿರುದ್ಧ ದೆಹಲಿ ತಿಸ್ ಹಜಾರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಈಕೆ, 10 ಕೋಟಿ ರೂ. ಪರಿಹಾರ ಕೇಳಿದ್ದಾರೆ.

ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಹನಿಸಿಂಗ್‌ಗೆ ನೋಟಿಸ್ ಕಳುಹಿಸಿದ್ದಾರೆ. ಹನಿಸಿಂಗ್ ಹಾಗೂ ಪತ್ನಿಯ ಜಂಟಿ ಪ್ರಾಪರ್ಟಿ ಹಕ್ಕಿನಲ್ಲಿ ಹೊಸ ಅಲೆಯನ್ಸ್ ಅಥವಾ ಮೂರನೇ ವ್ಯಕ್ತಿಗೆ ಹಕ್ಕು ನೀಡಬಾರದು. ಹನಿ ಸಿಂಗ್ ಹಾಗೂ ಅವರ ಪತ್ನಿ ನೋಯ್ಡಾದಲ್ಲಿ ಹೊಂದಿರುವ ಆಸ್ತಿಗೆ ಇದು ಅನ್ವಯವಾಗಲಿದ್ದು, ಅವರ ಪತ್ನಿಯ ಆಭರಣಕ್ಕೂ ಸಂಬಂಧಪಡುತ್ತದೆ ಎಂದು ಹನಿ ಸಿಂಗ್ ಪತ್ನಿಯ ಲಾಯರ್ ಹೇಳಿದ್ದಾರೆ.

“ಒಮ್ಮೆ ನಾನು ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಹನಿಸಿಂಗ್ ತಂದೆ ಬಂದು ಎದೆ ಮುಟ್ಟಿದರು. ಅನೇಕ ಮಹಿಳೆಯರ ಜೊತೆ ನನ್ನ ಪತಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ನಮ್ಮ ಮದುವೆಯ ಉಂಗುರ ಅಮಂಗಳ ಎಂದು ಅವರು ಧರಿಸುತ್ತಿರಲಿಲ್ಲ. ನಾನು ಮದುವೆಯ ಫೋಟೋವನ್ನು ಲೀಕ್ ಮಾಡಿದ್ದೇನೆ ಎಂದು ದೌರ್ಜನ್ಯವೆಸಗಿದ್ದರು” ಎಂದು ಶಾಲಿನಿ ಆರೋಪ ಮಾಡಿದ್ದಾರೆ.

ಹನಿಸಿಂಗ್ ನೀಡಿದ ಮಾನಸಿಕ, ದೈಹಿಕ ಕಿರುಕುಳದಿಂದ ನಾನು ಡಿಪ್ರೆಶನ್‌ಗೂ ಹೋಗಿದ್ದೆ ಎಂದು ಶಾಲಿನಿ ಹೇಳಿದ್ದಾರೆ. 2011ರ ಜನವರಿ 23ರಂದು ಹನಿಸಿಂಗ್ ಹಾಗೂ ಶಾಲಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಕೆಲ ವರ್ಷಗಳ ನಂತರದಲ್ಲಿ ಹನಿಸಿಂಗ್ ರಾಷ್ಟ್ರೀಯ ವಾಹಿನಿಯಲ್ಲಿ ಮದುವೆ ವಿಷಯ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top