fbpx
ಸಮಾಚಾರ

ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ: ವೈರಲ್ ವಿಡಿಯೋ ನೋಡಿ

ನಟಿ ಅದಿತಿ ಪ್ರಭುದೇವ ಅವರು ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಕಲ್ಲಿ ಸಖತ್ ವೈರಲ್ ಆಗುತ್ತಿದೆ.

ಅದಿತಿ ಅವರು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಆರಂಭದಲ್ಲಿ ಕಿರುತೆರೆಯಲ್ಲಿ ಮಿಂಚಿ, ನಂತರ ಹಿರಿತೆರೆಗೆ ಕಾಲಿಟ್ಟರು. ಎರಡರಲ್ಲೂ ಅವರು ಜನಮನ್ನಣೆ ಪಡೆದುಕೊಳ್ಳಲು ಯಶಸ್ವಿಯಾದರು. ಆದರೆ, ಅವರು ತಮ್ಮ ಹಿನ್ನೆಲೆ ಮರೆತಿಲ್ಲ. ತಾವೇ ಟ್ರ್ಯಾಕ್ಟರ್​ ಏರಿ ಗದ್ದೆಯನ್ನು ಹೂಡುತ್ತಿರುವ ವಿಡಿಯೋವನ್ನು ಅದಿತಿ ಹಂಚಿಕೊಂಡಿದ್ದಾರೆ.

 

 

ಎಲ್ಲರಿಗೂ ನಮಸ್ಕಾರ, ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನೆಲೆ ಇದ್ದರೂ ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ. ಪ್ರಕೃತಿಯ ಜೊತೆಗಿನ ನಂಟು ಜೀವನಕ್ಕೆ ಸಾರ್ಥಕತೆಯನ್ನು ನೆಮ್ಮದಿಯನ್ನು ತರುತ್ತದೆ. ಆ ಸಂತೋಷವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದಿದ್ದಾರೆ.

ಅನೇಕ ಜನರ ಕನಸಂತೆ ನನಗೂ ನನ್ನದೇ ಆದ ಒಂದು ಪುಟ್ಟ ತೋಟ ಮಾಡುವ ಹಂಬಲ. ನೋಡೋಣ, ಮುಂದೊಂದು ದಿನ ಅದು ಆದರೂ ಆಗಬಹುದು. ಅದೆಷ್ಟೋ ಬಾರಿ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಂಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಈ ವೀಡಿಯೋ ಪ್ರತಿಯೊಬ್ಬ ರೈತ ಮಿತ್ರನಿಗೆ ಸಮರ್ಪಣೆ ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top