fbpx
ಸಮಾಚಾರ

ಫಿನಾಲೆಗೂ ಮುನ್ನವೇ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮೊತ್ತದ ಹಣ ಪಡೆದ ಅರವಿಂದ್​ ಕೆ ಪಿ

ಬಿಗ್ ಬಾಸ್​ ಫಿನಾಲೆ ಇದೇ ಭಾನುವಾರ ಅದ್ದೂರಿಯಾಗಿ ನಡೆಯಲಿದೆ. ಹೀಗಿರುವಾಗಲೇ ಫಿನಾಲೆಗೂ ಮುನ್ನ ಕೆಲವೊಂದು ಸೀಸನ್​ನಲ್ಲಿ ಸ್ಪರ್ಧಿಗಳಿಗೆ ದೊಡ್ಡ ಮೊತ್ತದ ಹಣ ಕೊಟ್ಟು ಬಿಗ್ ಬಾಸ್​ ಫಿನಾಲೆಯಿಂದ ಹಿಂದೆ ಸರಿಯುವ ಆಫರ್ ನೀಡಲಾಗುತ್ತದೆ. ಹೀಗೆಕೊಡುವ ಹಣವನ್ನು ತೆಗೆದುಕೊಂಡು ಕೆಲವರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ. ಹೀಗಿರುವಾಗಲೇ ಕೆಪಿ ಅರವಿಂದ್ ಅವರಿಗೆ ಈಗ ದೊಡ್ಡ ಮೊತ್ತದ ಹಣ ಸಿಕ್ಕಿದೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು 113 ದಿನಗಳ ಸುದೀರ್ಘ ಪಯಣದಲ್ಲಿ ಎಲ್ಲಾ ಭಾವಗಳನ್ನು ದಾಟಿ ಗುರಿಗೆ ಹತ್ತಿರವಾಗಿದ್ದಾರೆ. ಎರಡು ಲಕ್ಷ ಪಡೆದುಕೊಳ್ಳಲು ಬಿಗ್​ ಬಾಸ್​ ಟಾಸ್ಕ್​ ನೀಡುತ್ತಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 5 ಅಂಕ, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗೆ ಅಂಕ 3 ಹಾಗೂ ಮೂರನೇ ಸ್ಥಾನಕ್ಕೆ 1 ಅಂಕ ಸಿಗುತ್ತದೆ. ವಾರದ ಕೊನೆಯಲ್ಲಿ ಯಾರ ಬಳಿ ಅಂಕ ಹೆಚ್ಚಿರುತ್ತದೆಯೋ ಅವರಿಗೆ ಎರಡು ಲಕ್ಷ ರೂಪಾಯಿ ಸಿಗಲಿದೆ’ ಎಂದು ಬಿಗ್​ ಬಾಸ್​ನಿಂದ ಸುತ್ತೋಲೆ ಬಂದಿತ್ತು.

ಬಿಗ್​ ಬಾಸ್​ ನೀಡಿದ್ದ 2 ಲಕ್ಷ ಗೆಲ್ಲುಗವ ಟಾಸ್ಕ್​ನಲ್ಲಿ ಅರವಿಂದ್​ ಹೆಚ್ಚು ಅಂಕ ಗಳಿಸುವ ಮೂಲಕ ಜಯಗಳಿಸಿದ್ದಾರೆ. ಆ ಟಾಸ್ಕ್ ಇಂದು ಪೂರ್ಣಗೊಂಡಿದ್ದು, ಅರವಿಂದ್ ಅವರನ್ನು ವಿಜೇತರನ್ನಾಗಿ ಪ್ರಕಟಿಸಲಾಗಿದೆ. ಈ ಮೂಲಕ ಫಿನಾಲೆಗೂ ಮುನ್ನ ಅರವಿಂದ್​ ಅವರು 2 ಲಕ್ಷ ಗೆದ್ದ ಖುಷಿಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top