fbpx
ಸಮಾಚಾರ

ಆಗಸ್ಟ್ 08: ನಾಳೆಯ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 8, 2021 ಭಾನುವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ 7:19 pm
ನಕ್ಷತ್ರ : ಪುಷ್ಯ 9:19 am
ಯೋಗ : ವ್ಯತಿಪಾತ 11:38 pm
ಕರಣ : ಚತುಷ್ಪಾದa 7:19 am ನಾಗ 7:19 pm

Time to be Avoided
ರಾಹುಕಾಲ : 5:06 pm – 6:40 pm
ಯಮಗಂಡ : 12:25 pm – 1:58 pm
ದುರ್ಮುಹುರ್ತ : 5:00 pm – 5:50 pm
ವಿಷ : 10:23 pm – 12:01 am
ಗುಳಿಕ : 3:32 pm – 5:06 pm

Good Time to be Used
ಅಮೃತಕಾಲ : Nil
ಅಭಿಜಿತ್ : 12:00 pm – 12:50 pm

Other Data
ಸೂರ್ಯೋದಯ : 6:06 am
ಸುರ್ಯಾಸ್ತಮಯ : 6:43 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಕರ್ಕಾಟಕ

 

 

 

ಬಹುಜನರಿಗೆ ಪ್ರಿಯರಾಗಿದ್ದೀರಿ. ಆದರೆ ತುಸುವಾದರೂ ನಿಷ್ಠುರತೆ ಬೆಳೆಸಿಕೊಳ್ಳದಿದ್ದರೆ ತೊಂದರೆ ಎದುರಿಸುವಿರಿ. ನಿಮ್ಮತನವನ್ನು ಕಾಯ್ದುಕೊಳ್ಳಲು ಕೆಲವರಿಂದ ಅಂತರ ಕಾಯ್ದಿಟ್ಟುಕೊಳ್ಳಿ.

ನೀವು ತುಂಬಾ ಉದಾರಿಯಾಗಿರುವುದು ನಿಮಗೇ ತೊಂದರೆಯನ್ನುಂಟು ಮಾಡುವುದು. ಒಳ್ಳೆಯತನಕ್ಕೂ ಒಂದು ಮಿತಿ ಉಂಟು. ಆ ಮಿತಿ ಅರಿತು ಸಮಾಜದಲ್ಲಿ ವರ್ತಿಸಿ. ಇದರಿಂದ ಮಡದಿ ಮಕ್ಕಳು ಸಂತಸ ಪಡುವರು.

 

ಉಗುರಿನಲ್ಲಿ ಕತ್ತರಿಸುವ ಕೆಲಸಗಳಿಗೆ ಕೊಡಲಿ ಹಿಡಿಯುವ ವೃಥಾ ಶ್ರಮ ಕೈಬಿಡಿ. ಅನಗತ್ಯ ಸಂಶಯವೇ ನಿಮ್ಮ ಕಾರ್ಯಹಾನಿಗೆ ಕಾರಣವಾಗುವುದು. ಧನಾತ್ಮಕವಾಗಿ ಚಿಂತಿಸಿ ಧನ್ಯತೆ ಹೊಂದಿ.

ನಿಮ್ಮ ಸುತ್ತಮುತ್ತಲೂ ನಿಮ್ಮ ಆರಾಧಿಸುವ, ವಿರೋಧಿಸುವ ಜನರು ಇದ್ದೇ ಇರುತ್ತಾರೆ. ಅವರ ನಿಜವಾದ ಮುಖವಾಡ ತಿಳಿಯದೆ ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ.

 

ನಿಮ್ಮ ಎದುರಿಗೆ ಒಮ್ಮೆಲೇ ಹಲವಾರು ದಾರಿಗಳು ಗೋಚರಿಸಲಿವೆ. ಆದರೆ ನಿಮ್ಮ ಸತ್ಯವೇ ನಿಮ್ಮನ್ನು ರಕ್ಷಿಸಲಿದೆ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚಿ ಸಂತೋಷ ವ್ಯಕ್ತಪಡಿಸುವರು.

 

ದಿವ್ಯವಾದ ಅಪರೂಪದ ಶಕ್ತಿಯೊಂದು ನಿಮ್ಮಿಂದ ರಚನಾತ್ಮಕ ಕಾರ್ಯಗಳನ್ನು ಮಾಡಿಸಲಿದೆ. ಹಾಗಾಗಿ ಹೆಚ್ಚು ಚಿಂತಿತರಾಗದೆ ನಿಮ್ಮ ಕೆಲಸ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.

 

 

ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಅಂತೆಯೇ ನಿಮ್ಮ ಸಾಧನೆ ದಾರಿಯಲ್ಲಿ ಯಾವುದೇ ಒಳಮಾರ್ಗಗಳು ನಿಮಗೆ ದೊರೆಯಲಾರವು. ಹಾಗಾಗಿ ನೀವು ಶ್ರದ್ಧೆ ಇಟ್ಟು ಕೆಲಸ ಮಾಡಿದಲ್ಲಿ ಯಶಸ್ಸು ಹೊಂದುವಿರಿ.

 

 

ಸಿದ್ಧಿಗಾಗಿ ದಾರಿ ತೆರೆದುಕೊಳ್ಳಲಿದೆ. ಕ್ರಿಯಾಶೀಲರಾದ ನಿಮಗೆ ಅನ್ಯ ಜನರಿಂದ ಪ್ರಶಂಸೆಗಳು ಹೇರಳವಾಗಿ ಬರುವವು ಮತ್ತು ನೂತನ ಜವಾಬ್ದಾರಿ ನಿಮ್ಮನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುವುದು. ಈ ಬಗ್ಗೆ ಹೆಮ್ಮೆಪಡಿ.

 

ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡದಿರುವುದು ಒಳ್ಳೆಯದು. ಎಲ್ಲಾ ಕೆಲಸವನ್ನು ನಾನೊಬ್ಬನೇ ಮಾಡುತ್ತೇನೆ ಎಂಬ ಗರ್ವ ಬೇಡ. ನಿಧಾನವಾಗಿ ಚಿಂತಿಸಿ ಕಾರ್ಯ ಹಮ್ಮಿಕೊಳ್ಳಿ ಒಳಿತಾಗುವುದು.

 

ನೀವು ಅನೇಕ ರೀತಿಯ ಮತ್ತು ವೈವಿಧ್ಯಮಯ ಗುರಿಗಳನ್ನು ಸಾಧಿಸಲಿದ್ದೀರಿ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು ಮತ್ತು ಜನರ ಸಂಪರ್ಕವೂ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

ನೀವು ಜನರೆದುರು ಧೈರ್ಯದಿಂದ ತೆರೆದುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರಲು ದಾರಿಯಾಗುವುದು. ಇದರಿಂದ ಅನವಶ್ಯಕ ಟೀಕೆ ಟಿಪ್ಪಣಿಗಳಿಗೆ ಗುರಿ ಆಗುವುದು ತಪ್ಪುತ್ತದೆ. ಹಣ ಖರ್ಚು ಮಾಡುವ ಮುನ್ನ ಎರಡು ಬಾರಿ ಚಿಂತಿಸಿ.

 

ಗೆಳೆಯರಿಂದ ಹೆಚ್ಚಿನ ಸಹಾಯ ಸಹಕಾರಗಳು ಸಿಗಲು ಹೇರಳ ಅವಕಾಶಗಳು ನಿಮ್ಮ ಪಾಲಿಗೆ ಬರಲಿವೆ ಮತ್ತು ನಿಮ್ಮ ಮನೋಗತ ಕಾರ್ಯಗಳು ಪೂರ್ಣಗೊಳ್ಳುವವು. ಹಲವು ಮೂಲಗಳಿಂದ ಹಣಕಾಸು ಬರುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top