fbpx
ಸಮಾಚಾರ

‘ಬಿಗ್ ಬಾಸ್’ ವಿಜೇತರಿಗೆ ಈ ಬಾರಿ 50 ಲಕ್ಷ ರೂ. ಸಿಗುವುದಿಲ್ಲ! ಬಹುಮಾನ ಮೊತ್ತದಲ್ಲಿ ಬದಲಾವಣೆ! ಉಳಿದವರಿಗೂ ನಗದು ಬಹುಮಾನ

ಈ ಬಾರಿಯ ಬಿಗ್​ ಬಾಸ್​ ಸೀಸನ್​ ಯಾರು ಗೆಲ್ಲಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಐದು ಸ್ಪರ್ಧಿಗಳು ಸದ್ಯ ಫಿನಾಲೆ ತಲುಪಿದ್ದು, ಇದರಲ್ಲಿ ಒಬ್ಬರು ಗೆಲ್ಲಲಿದ್ದಾರೆ. ಈ ಮದ್ಯೆ ಬಿಗ್ ಬಾಸ್ ವಿಜೇತರಿಗೆ ಸಿಗುವ ಬಹುಮಾನ ಮೊತ್ತ ಏರಿಕೆಯಾಗಿದೆ.. ಈ ಬಾರಿ ಫೈನಲ್ಗೆ ತಲುಪಿದ ಸ್ಪರ್ದಿಗಳಿಗೂ ಹಣ ನೀಡಲಾಗುತ್ತದೆ..

ಬಿಗ್​ ಬಾಸ್​ ಗೆದ್ದವರಿಗೆ 53 ಲಕ್ಷ ರೂಪಾಯಿ, ರನ್ನರ್​ ಅಪ್​ಗೆ 11 ಲಕ್ಷ ರೂಪಾಯಿ, ಮೂರನೇ ಸ್ಥಾನ ಪಡೆದವರಿಗೆ 6 ಲಕ್ಷ ರೂಪಾಯಿ, ನಾಲ್ಕನೇ ಸ್ಥಾನದಲ್ಲಿರುವವರಿಗೆ 3.5 ಲಕ್ಷ ರೂಪಾಯಿ ಹಾಗೂ ಐದನೇ ಸ್ಥಾನದಲ್ಲಿರುವ ಸ್ಪರ್ಧಿಗೆ 2.5 ಲಕ್ಷ ರೂಪಾಯಿ ಸಿಗಲಿದೆ ಎಂದು ಸುದೀಪ್​ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಸಿಗುತ್ತಿರುವ ಬಹುಮಾನದ ಮೊತ್ತದ ಹಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಗೆದ್ದವರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಈ ಮೊತ್ತದಲ್ಲಿ 3 ಲಕ್ಷ ರೂಪಾಯಿ ಏರಿಕೆ ಮಾಡಲಾಗಿದೆ. ಇನ್ನು ರನ್ನರ್ ಅಪ್‍ಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈ ಬಾರಿ ಟಾಪ್ 5ರಲ್ಲಿರುವ ಎಲ್ಲರಿಗೂ ಮೊತ್ತ ನೀಡಲಾಗುತ್ತಿದೆ. ಸ್ಪರ್ಧಿಗಳು ಈ ವಿಚಾರವನ್ನು ಕೇಳಿ ಸಖತ್ ಖುಷಿಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top