fbpx
ಸಮಾಚಾರ

48 ಗಂಟೆಯೊಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸಿ – ಧನುಷ್‍ಗೆ ಹೈಕೋರ್ಟ್ ಆದೇಶ

ತೆರಿಗೆ ತುಂಬದೇ ಐಷಾರಾಮಿ ಕಾರನ್ನು ಓಡಿಸಿದ ತಮಿಳು ನಟ ದಳಪತಿ ವಿಜಯ್​ಗೆ ಕೋರ್ಟ್​ ಛೀಮಾರಿ ಹಾಕಿತ್ತು. ಈಗ ನಟ ಧನುಷ್​ ಸರದಿ. ಅವರು ಆಮದು ಮಾಡಿಕೊಂಡ ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ ವಿನಾಯಿತಿ ನೀಡುವಂತೆ 2015ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಹಿಂಪಡೆಯಲು ಕೋರ್ಟ್​ ನಿರಾಕರಿಸಿದೆ. ನಟ ಧನುಷ್‍ಗೆ 48 ಗಂಟೆಗಳ ಒಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶಿಸಿದೆ. ಅಲ್ಲದೆ, ಧನುಷ್​ಗೆ ಈ ವಿಚಾರದಲ್ಲಿ ಕಿವಿ ಮಾತು ಕೂಡ ಹೇಳಿದೆ.

ಏನಿದು ತೆರಿಗೆ ವಿವಾದ?
ನಟ ಧನುಷ್ ಅವರು 2015ರಲ್ಲಿ ವಿದೇಶದಿಂದ ದುಬಾರಿ ಬೆಲೆಯ ರೋಲ್ಸ್ ರಾಯ್ ಕಾರನ್ನು ಆಮದು ಮಾಡಿಕೊಂಡಿದ್ದರು. ಆಗ ಅದಕ್ಕೆ ಅವರು 60 ಲಕ್ಷ ರೂ. ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ, ಅವರು ಆಗ ಬರೀ 30 ಲಕ್ಷ ರೂ. ಪಾವತಿಸಿ, ಉಳಿದ ಮೊತ್ತಕ್ಕೆ ವಿನಾಯಿತಿ ಕೋರಿದ್ದರು. ಆ ಸಂಬಂಧ ನ್ಯಾಯಾಲಯಕ್ಕೆ ಅರ್ಜಿಯನ್ನೂ ಹಾಕಿದ್ದರು. ಗುರುವಾರ (ಆ.5) ಅದು ವಿಚಾರಣೆಗೆ ಬಂದಿತ್ತು. ಆದರೆ, ಇದೀಗ ಅದೇಕೋ ವಿನಾಯಿತಿ ಕೋರಿ ದಾಖಲಿಸಿದ್ದ ಅರ್ಜಿಯನ್ನು ವಾಪಸ್‌ ಪಡೆಯಲು ಧನುಷ್‌ ಮುಂದಾಗಿದ್ದಾರೆ. ಆದರೆ, ಇದಕ್ಕೆ ಕೋರ್ಟ್ ಅನುಮತಿ ನೀಡಿಲ್ಲ.

‘ನಟ ಧನುಷ್‌ಗೆ ನಿಜವಾದ ಕಾಳಜಿ ಇದ್ದಿದ್ದರೆ, ಈ ಹಿಂದೆ ತೆರಿಗೆಯನ್ನು ಕಟ್ಟಬಹುದಿತ್ತು. ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬಂದಮೇಲೆ ಏಕೆ ಅದನ್ನು ವಾಪಸ್ ಪಡೆಯುವುದಕ್ಕೆ ತಿರ್ಮಾನಿಸಿದ್ದೀರಿ’ ಎಂದು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಪ್ರಶ್ನಿಸಿದ್ದಾರೆ. ಜೊತೆಗೆ, ‘‘ತೆರಿಗೆದಾರರ ಹಣವನ್ನು ಬಳಸಿಕೊಂಡು ನೀವು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಓಡಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ’ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್ ಅವರು ಧನುಷ್​ಗೆ ಛೀಮಾರಿ ಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top