fbpx
ಸಮಾಚಾರ

ಗ್ರ್ಯಾಂಡ್ ಫಿನಾಲೆಯಲ್ಲಿ ಎಲಿಮಿನೇಟ್ ಆದ ಪ್ರಶಾಂತ್ ಸಂಭರ್ಗಿಗೆ ಬಿದ್ದಿದ್ದ ಒಟ್ಟು ಮತಗಳು ಎಷ್ಟು ಗೊತ್ತಾ? ಸುದೀಪ್ ಮಾಹಿತಿ ಇದು

ಈ ಬಾರಿಯ ಬಿಗ್​ ಬಾಸ್​ ಸೀಸನ್​ ಯಾರು ಗೆಲ್ಲಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಐದು ಸ್ಪರ್ಧಿಗಳು ಸದ್ಯ ಫಿನಾಲೆ ತಲುಪಿದ್ದು, ಇದರಲ್ಲಿ ಒಬ್ಬರು ಗೆಲ್ಲಲಿದ್ದಾರೆ. ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಕಪ್​ ಜತೆಗೆ 50 ಲಕ್ಷ ರೂಪಾಯಿ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಅದಕ್ಕೂ ಮೊದಲು ಬಿಗ್​ ಬಾಸ್​ ಮನೆಯಿಂದ ಪ್ರಶಾಂತ್​ ಸಂಬರಗಿ ಹಾಗೂ ವೈಷ್ಣವಿ ಗೌಡ ಔಟ್​ ಆಗಿದ್ದಾರೆ.

ಇಲ್ಲಿಯವರೆಗೆ ಇದ್ದು ಟಾಪ್ 5 ಕಂಟೆಸ್ಟೆಂಟ್ ಗಳಲ್ಲಿ ಇದೀಗ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಮನೆಯಿಂದ ಔಟ್ ಆಗಿದ್ದಾರೆ. ಮನೆಯಲ್ಲಿ ಸದ್ಯ ಅರವಿಂದ್, ಮಂಜು ಪಾವಗಡ ಹಾಗೂ ದಿವ್ಯಾ ಉರುಡುಗ ಟಾಪ್​​ 3 ಸ್ಪರ್ಧಿಗಳಾಗಿ ಗ್ರ್ಯಾಂಡ್​ ಫಿನಾಲೆಗೆ ತಲುಪಿದ್ದಾರೆ.

ಪ್ರಶಾಂತ್‌ಗೆ ಬಂದ ವೋಟ್‌ಗಳೆಷ್ಟು?
ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿದ್ದ ಪ್ರಶಾಂತ್ ಸಂಬರಗಿಗೆ ಬಂದ ಮತಗಳೆಷ್ಟು? ಬಿಗ್ ಬಾಸ್ ವೇದಿಕೆ ಮೇಲೆ ಆ ಸತ್ಯ ಕೂಡ ಗೊತ್ತಾಗಿದೆ. ಕಿಚ್ಚ ಸುದೀಪ್ ಅವರು ಪ್ರಶಾಂತ್ ಪಡೆದುಕೊಂಡ ಮತಗಳ ಬಗ್ಗೆ ಮಾಹಿತಿ ಹಂಚಿಕೊಂಡರು. 6,69,020 ವೋಟ್‌ಗಳು ಪ್ರಶಾಂತ್‌ಗೆ ಬಂದಿದ್ದವು. ಅಲ್ಲದೆ, ಪ್ರಶಾಂತ್ ಶೋನಿಂದ ಹೊರಬಿದ್ದರೂ ಕೂಡ, ಬರಿಗೈನಲ್ಲಿ ಮನೆಗೆ ಹೋಗುವುದಿಲ್ಲ. ಅವರಿಗೆ 2.5 ಲಕ್ಷ ರೂ. ನಗದು ಹಣ ಬಹುಮಾನದ ರೂಪವಾಗಿ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top