fbpx
ಸಮಾಚಾರ

ಕನ್ನಡ ನಾಡು ನುಡಿ, ಜನ ಸಾಮಾನ್ಯರ ಪರ ಕೆಲಸದಲ್ಲಿ ಟ್ರೆಂಡ್ ಸೆಟ್ಟರ್ ಎನಿಸಿಕೊಂಡ ಸಂಸದ ಜಿಸಿ ಚಂದ್ರಶೇಖರ್

ಕನ್ನಡ ನಾಡು ನುಡಿ ವಿಚಾರದಲ್ಲಿ ಅತಿಯಾದ ಅಭಿಮಾನ, ಕಾಳಜಿ ಹೊಂದಿರುವ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವ್ರು ಇತ್ತೀಚಿನ ದಿನಗಳಲ್ಲಿ ಒಂದು ರೀತಿ ಟ್ರೆಂಡ್ ಸೆಟ್ಟರ್ ಆಗಿ ಪರಿಣಮಿಸಿದ್ದಾರೆ. ಕರುನಾಡ ಜನ ಸಾಮಾನ್ಯರ ಸಮಸ್ಯೆಗಳಿಗೆ ನಿರಂತರವಾಗಿ ದನಿಯಾಗುವ ಮೂಲಕ ಜನಮನ್ನಣೆ ಗಳಿಸಿರುವ ಚಂದ್ರಶೇಖರ್ ಅವ್ರು ಏನೇ ಜನಪರ ಯೋಜನೆ ಕೈಗೊಂಡರೂ ಅದನ್ನು ಇತರ ರಾಜಕಾರಣಿಗಳು ಅನುಸರಿಸುವಂತಾಗಿದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಕೋವಿಡ್ ಲಸಿಕಾ ಪ್ರಮಾಣ ಪತ್ರ ವಾಟ್ಸಾಪ್ ನಲ್ಲೆ ಲಭ್ಯತೆಯ ಸೌಲಭ್ಯ.

ಹೌದು, ಜಿಸಿ ಚಂದ್ರಶೇಖರ್ ಅವರ ವತಿಯಿಂದ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗಳಲ್ಲಿಯೇ ಲಸಿಕೆ ಪ್ರಮಾಣ ಪತ್ರ ಡೌನ್ಲೋಡ್, ಲಸಿಕೆ ಬುಕಿಂಗ್ಗ್ ಮುಂತಾದ ಲಸಿಕೆ ವಿಚಾರಕ್ಕೆ ಸಂಬಂದಿಸಿದ ಮಾಹಿನಿಯನ್ನು ನೀಡುವ ಸೌಲಭ್ಯವನ್ನು ಸುಮಾರು ತಿಂಗಳ ಹಿಂದೆಯೇ ಜಾರಿಗೆ ತರಲಾಗಿದೆ. ‘BOT ತಂತ್ರಾಂಶ’ದ ಮೂಲಕ ಈ ಯೋಜನೆಯನ್ನು ಜನರಿಗೆ ಸಹಕಾರಿಯಾಗಿ ರೂಪಿಸಲಾಗಿದೆ ಅತೀ ಸುಲಭವಾಗಿ ವ್ಯಾಕ್ಸಿನ್ ಕುರಿತಾದ ಎಲ್ಲಾ ಸೌಲಭ್ಯ ಪಡೆಯಬಹುದು.

 

 

ಯಾರು ಲಸಿಕೆ ಪಡೆದುಕೊಂಡಿದ್ದಾರೆ, ಯಾರು ಲಸಿಕೆ ಪಡೆದುಕೊಂಡಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಸರ್ಕಾರದಿಂದ ಅಧಿಕೃತ ಪ್ರಮಾಣಪತ್ರವನ್ನು ಕೊ-ವಿನ್ ಅಪ್ಲಿಕೇಷನ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ಆದರೆ ಅದನ್ನು ತೆಗೆದುಕೊಳ್ಳುವುದು ಗ್ರಾಮೀಣ ಪ್ರದೇಶದ ಜನರು ಮತ್ತು ಅನಕ್ಷರಸ್ಥರಿಗೆ ತಿಳಿಯುತ್ತಿರಲಿಲ್ಲ. ಈ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ಸಂಸದ ಜಿಸಿ ಚಂದ್ರಶೇಖರ್ ಈ ಕ್ರಮ ಕೈಗೊಂಡಿದ್ದರು. ಇದೀಗ ಬಹುತೇಕ ಈ ವಿಧಾನವನ್ನೇ ಸ್ವತಃ ಕೇಂದ್ರ ಅರೋಗ್ಯ ಇಲಾಖೆ ಅನುಸರಿಸಿದೆ. ಈ ಮೂಲಕ ಭಾರತ ಒಕ್ಕೂಟ ಸರ್ಕಾರ ಕನ್ನಡ ನಾಡಿನ ಹೆಮ್ಮೆಯ ಸಂಸದನ ಯೋಜನೆಯನ್ನು ಅನುಸರಿಸಿದೆ.

 

 

ಕೋವಿಡ್ 19 ಲಸಿಕೆ ಪಡೆದ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ವಾಟ್ಸಾಪ್‌ಗೆ ಲಸಿಕೀಕರಣ ಪ್ರಮಾಣಪತ್ರ ರವಾನೆಯಾಗಲಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ತಮ್ಮ ಲಸಿಕೆ ದೃಢೀಕರಣ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಯಸುವವರು, ವಾಟ್ಸಾಪ್ ಸಂಖ್ಯೆಯೊಂದಕ್ಕೆ ಮೆಸೇಜ್ ಕಳುಹಿಸಬೇಕು. ಅವರಿಗೆ ಪ್ರಮಾಣಪತ್ರ ರವಾನೆಯಾಗಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಕಚೇರಿ ತಿಳಿಸಿದೆ.

ಸರ್ಕಾರೀ ಶಾಲೆಗಳ ಅಭಿವೃದ್ಧಿಯಲ್ಲೂ ಟ್ರೆಂಡ್:
ಅಂದಹಾಗೆ ಲಸಿಕೆ ತಂತ್ರಾಂಶ ವಿಚಾರದಲ್ಲಿ ಮಾತ್ರ ಜಿಸಿ ಚಂದ್ರಶೇಖರ್ ಟ್ರೆಂಡ್ ಸೆಟ್ಟರ್ ಆಗಿಲ್ಲ. ಕನ್ನಡ ನಾಡು ನುಡಿಯ ಬಹುತೇಕ ವಿಚಾರಗಳಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಜಿಸಿ ಚಂದ್ರಶೇಖರ್ ಇಲ್ಲಿಯವರೆಗೆ ಸಾಕಷ್ಟು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. #SaveGovernmentSchool #ಸರ್ಕಾರಿಶಾಲೆಉಳಿಸಿ ಹಾಗು #GirlsPride ಅಭಿಯಾನಗಳನ್ನು ಆರಂಭಿಸಿ ಅದರ ಅಡಿಯಲ್ಲಿ ಬೆಂಗಳೂರಿನ ದಾಸರಹಳ್ಳಿ, ಹೆಬ್ಬಾಳ ಮತ್ತು ಶಿವಾಜಿ ನಗರ, ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ನೂತನ ತಂತ್ರಜ್ಞಾನಗಳನ್ನು ವ್ಯವಸ್ಥೆ ಮಾಡಿಸಿದ್ದಾರೆ.

 

 

ಚಂದ್ರಶೇಖರ್ ಅವರ ಈ ಕಾರ್ಯ ನಾಗರೀಕ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ ಕುಮಾರ್ ಅವರು ಕೂಡ ಚಂದ್ರಶೇಖರ್ ಅವರ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಸಿ ಚಂದ್ರಶೇಖರ್ ಅವರು ಅಭಿವೃದ್ಧಿ ಪಡಿಸಿದ್ದ ದಾಸರಹಳ್ಳಿಯ ಸರ್ಕಾರೀ ಶಾಲೆಗೆ ಸ್ವತಃ ಭೇಟಿ ನೀಡಿದ್ದ ಸುರೇಶ್ ಕುಮಾರ್ ಅವ್ರು ಶಾಲೆಯ ಸೌಕರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ಸುರೇಶ ಕುಮಾರ್ ಅವರು ವಿಸ್ತಾರವಾಗಿ ಬರೆದು ಕೊಂಡಾಡಿದ್ದರು,.

 

 

ಸಂಸದ ಜಿಸಿ ಚ್ಛಂದ್ರಶೇಖರ್ ಅವರು ಬಲು ಚಂದವಾಗಿ ಸರ್ಕಾರೀ ಶಾಲೆಯನ್ನು ಅಭಿವೃದ್ಧಿ ಪಡಿಸಿದ ನಂತರ ರಾಜ್ಯದಲ್ಲಿ ಅನೇಕ ಮಂದಿ ಧನಿಕರು, ಸಂಘ ಸಂಸ್ಥೆಗಳು ಕೂಡ ಸರ್ಕಾರೀ ಶಾಲೆಗಳಿಗೆ ನೂತನ ತಂತ್ರಜ್ಞಾನಗಳನ್ನು ಪೂರೈಸುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇವರೆಲ್ಲರಿಗೂ ಜಿಸಿ ಚಂದ್ರಶೇಖರ್ ಪ್ರೇರಣೆ ಎಂದರೆ ತಪ್ಪಾಗಲಾರದು.

 

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆ ಹಿಡಿದಿದೆ. ಹೈ ಕೋರ್ಟ್ ನ ಈ ನಡೆಗೆ ಸಂಸದ ಜಿಸಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ ಸಂಸತ್ ಅಧಿವೇಶನದಲ್ಲಿಯೂ ಕೂಡ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಂತಿಮವಾಗಿ ರಾಜ್ಯ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಈ ಮೂಲಕ ಕನ್ನಡ ನಾಡಿನ ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಶೇ 25ರಷ್ಟು ಮೀಸಲಾತಿಗೆ ಗ್ರೀನ್ ಸಿಗ್ನಲ್ ಸಿಕ್ಕಿತು.

 

 

ಐಬಿಪಿಎಸ್ ಹೋರಾಟದಲ್ಲಿ ಚಂದ್ರಶೇಖರ್:
ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ. ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಆರೋಪಿಸಿ ಕನ್ನಡಿಗರು ಹೋರಾಟ ನಡೆಸುತ್ತಲೇ ಬಂದಿದ್ದಾರೆ.

 

 

ಇಂಥಾ ಗಂಭೀರ ಸಮಸ್ಯೆಯ ಬಗ್ಗೆ ರಾಜ್ಯದ ಸಂಸದರು ಸಂಸತ್ ನಲ್ಲಿ ಮಾತನಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಆದರೆ ಮೊನ್ನೆಯವರೆಗೂ ಯಾರೊಬ್ಬರೂ ಕೂಡ ಈ ಬಗ್ಗೆ ಧ್ವನಿಯೆತ್ತಿರಲಿಲ್ಲ. ಆದರೆ ಮೊದಲ ಬಾರಿಗೆ ಸಂಸದ ಜಿಸಿ ಚಂದ್ರಶೇಖರ್ ಐಬಿಪಿಎಸ್ ವಿಚಾರವನ್ನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಅಂದಿನ ಅರ್ಥ ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಐಬಿಪಿಎಸ್ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರು.

 

 

ಅಷ್ಟೇ ಅಲ್ಲದೆ ಪ್ರಸ್ತುತ ಹಣಕಾಸು ಸಚಿವೆಯಾಗಿರುವ ನಿರ್ಮಲ ಸೀತಾರಾಮನ್ ಅವರಿಗೂ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಸ್ವತಃ ನಿರ್ಮಲ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಸಚಿವೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಐಬಿಪಿಎಸ್‌ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸದನದಲ್ಲಿ ವರ್ಷಗಳ ಹಿಂದೆಯೇ ಘೋಷಿಸಿದ್ದರು. ಆದರೆ ಈವರೆಗೂ ಇದು ಅನುಷ್ಠಾನಕ್ಕೆ ಬಾರದಿರುವುದು ನೋವಿನ ಸಂಗತಿ.

ಬೆಳಗಾವಿ ವಿಚಾರದಲ್ಲಿ ಗುಡುಗಿದ್ದ ಚಂದ್ರಶೇಖರ್
ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡಂದಂತೆ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ. ಸುಮ್ಮನಿರುವ, ಕನ್ನಡಿಗರನ್ನು ಪದೇ ಪದೇ ಕೆಣಕುವುದು ಮರಾಠಿಗರ ಕಾಯಕವಾಗಿಬಿಟ್ಟಿದೆ. ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದರೂ ಅಲ್ಲಿನ ನಾಯಕರು ಉದ್ಧಟತನದ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸುತ್ತಲೇ ಇದ್ದಾರೆ.

ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಸಿಎಂ ಆದ ಆರಂಭದಿಂದಲೇ ಕರ್ನಾಟಕ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿ ವಿವಾದ ಎಬ್ಬಿಸುತ್ತಲೇ ಇದ್ದಾರೆ. ಆಗ ಬೆಳಗಾವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿತ್ತು. ಕರ್ನಾಟದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂಬ ಉದ್ಧವ್‌ ಠಾಕ್ರೆ ಹೇಳಿಕೆ ಕನ್ನಡಿಗರ ಪಿತ್ತ ನೆತ್ತಿಗೇರಿಸಿತ್ತು,. ಮಹಾ ಸಿಎಂ ವಿರುದ್ಧ ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಇದೆ ವಿಚಾರವಾಗಿ ಸಂಸದ ಜಿಸಿ ಚಂದ್ರಶೇಖರ್ ಅವರು ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದರು.

 

 

ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಕರ್ನಾಟಕದ ಜೊತೆ ಪದೇ ಪದೇ ತಕರಾರು ತೆಗೆಯುತ್ತಲೇ ಬಂದಿದೆ. ಸಂವಿಧಾನದ ವಿಧಿ 263 ,331 ರ ಪ್ರಕಾರ ರಾಜ್ಯಗಳ ಗಡಿ ವಿವಾದ ಪರಸ್ಪರ ಮಾತುಕತೆಯಲ್ಲಿ ಬಗೆಹರಿಯದಿದ್ದರೆ ಸುಪ್ರೀಂ ಕೋರ್ಟ್ ಮದ್ಯೆ ಪ್ರವೇಶಿಸಬೇಕೆಂದು ತಿಳಿಸಿದ್ದರೂ ಕೂಡ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕನ್ನಡಿಗರು ಸ್ವಾಭಿಮಾನದಿಂದ ಆಚರಿಸುವ ಕನ್ನಡ ರಾಜ್ಯೋತ್ಸವದಂದು ಸಂಘರ್ಷಕ್ಕೆ ಇಳಿದು ‘ಕರಾಳ ದಿನ’ವನ್ನಾಗಿ ಆಚರಿಸಬೇಕೆಂದು ಮಹಾರಾಷ್ಟ್ರದ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿದ್ದಾರೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂದು ಹೇಳುವುದು ಮತ್ತು ಸೀಮಾ ಸಂಕಲ್ಪ ಎಂಬ ಹೆಸರಿನಲ್ಲಿ ಬೆಳಗಾವಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಕನ್ನಡಿಗರ ಭಾವನೆಗೆ ದಕ್ಕೆ ತರುತ್ತಿದೆ. ಈ ರೀತಿಯ ಅನಗತ್ಯ ಹೇಳಿಕೆಗಳಿಂದ ನಮ್ಮ ರಾಜ್ಯ ಹತ್ತಿ ಉರಿಯುತ್ತಿದೆ. ನಾವು ಸ್ವಾಭಿನದಿಂದ ಗಾಂಧಿಮಾರ್ಗದಲ್ಲಿ ಪ್ರತಿಭಟಿಸಿ ನಮ್ಮ ಗಾಡಿಯನ್ನು ಕಾಪಾಡಿಕೊಳ್ಳುತ್ತೇವೆಯೇ ಹೊರತು ಒಂದಿಂಚು ಗಡಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ” ಎಂದು ಜಿಸಿ ಚಂದ್ರಶೇಖರ್ ಮಹಾರಾಷ್ಟ್ರ ಸರ್ಕಾರದ ಉಪಟಲಗಳ ವಿರುದ್ಧ ಘರ್ಜಿಸಿದ್ದರು.

ಇವೆಷ್ಟೇ ಅಲ್ಲ ಜಿಸಿ ಚಂದ್ರಶೇಖರ್ ಅವರು ಕೈಗೊಂಡಿರುವ ಜನ ಪರ ಕಾರ್ಯಕ್ರಮಗಳ ಹೇಳುತ್ತಾ ಹೋದರೆ ಒಂದು ದೊಡ್ಡ ಪಟ್ಟಿಯೇ ಸಿಗುತ್ತದೆ. ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಜನಪ್ರತಿನಿಧಿಗಳು ಇಲ್ಲದಂತಾಗಿತ್ತು, ಈಗ ಸಂಸದ ಜಿಸಿ ಚಂದ್ರಶೇಖರ್ ಕನ್ನಡಿಗರ ಪ್ರತಿ ಸಮಸ್ಯೆಗಳ ಕುರಿತು ಧ್ವನಿಯೆತ್ತುತ್ತಿರುವುದು ನಿಜಕ್ಕೂ ಶ್ಲಾಘನೀಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top