fbpx
ಸಮಾಚಾರ

ಆಗಸ್ಟ್ 10: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 10, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಿತೀಯಾ 6:05 pm
ನಕ್ಷತ್ರ : ಮಖ 9:52 am
ಯೋಗ : ಪರಿಘ 8:30 pm
ಕರಣ : ಬಾಲವ 6:33 am ಕುಲವ 6:05 pm

Time to be Avoided
ರಾಹುಕಾಲ : 3:32 pm – 5:05 pm
ಯಮಗಂಡ : 9:17 am – 10:51 am
ದುರ್ಮುಹುರ್ತ : 8:40 am – 9:30 am, 11:15 pm – 12:01 am
ವಿಷ : 5:45 pm – 7:20 pm
ಗುಳಿಕ : 12:24 pm – 1:58 pm

Good Time to be Used
ಅಮೃತಕಾಲ : 7:28 am – 9:04 am
ಅಭಿಜಿತ್ : 11:59 am – 12:49 pm

Other Data
ಸೂರ್ಯೋದಯ : 6:06 am
ಸುರ್ಯಾಸ್ತಮಯ : 6:43 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಸಿಂಹ

 

 

 

ಬೇರೆಯವರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ. ಗುರುವಿನ ಬಲವಿದೆ ಎಂದು ಕೈಲಾಗದ ಕೆಲಸಗಳನ್ನು ಹಮ್ಮಿಕೊಳ್ಳುವುದೂ ಒಳ್ಳೆಯದಲ್ಲ. ಆ ಕಾರ್ಯವನ್ನು ಜಾಣ್ಮೆಯಿಂದ ಮುಂದೆ ಹಾಕಿ.

ಮೇಲೆ ನಯಗಾರಿಕೆ ಒಳಗೆ ಹಾವಿನ ವಿಷದ ಜನ ಸಿಗುತ್ತಾರೆ. ಸಮಾಜದಲ್ಲಿ ಎರಡು ತರಹದ ಜನ ಇದ್ದೇ ಇರುತ್ತಾರೆ. ನಾವು ಅವರನ್ನು ಬದಲಿಸಲು ಸಾಧ್ಯವಿಲ್ಲ. ನಾವೇ ಬದಲಾಗಬೇಕು. ಹಾಗಾಗಿ ಈ ದಿಶೆಯಲ್ಲಿ ಚಿಂತಿಸಿ.

 

ಹಲ್ಲಿದ್ದಾಗ ಕಡಲೆಯಿಲ್ಲ. ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತೆ ಭಗವಂತ ಸಕಲ ಸವಲತ್ತನ್ನು ನೀಡಿದರೂ ಅನುಭವಿಸುವ ಯೋಗವಿಲ್ಲದಂತೆ ಆಗುವುದು. ಅದಕ್ಕಾಗಿ ಭಗವಂತನನ್ನೆ ಮೊರೆ ಹೋಗುವುದು ಒಳಿತು.

ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಶ್ರೇಯಸ್ಸಲ್ಲ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದು ದೃಢ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಎಲ್ಲವೂ ಒಳಿತಾಗುವುದು.

 

ನಂಬಿಕೆಗೆ ದ್ರೋಹ ಎದುರಾಗುವ ಸಂದರ್ಭವಿದ್ದು ಆತ್ಮೀಯರೊಡನೆ ವ್ಯವಹಾರಲ್ಲಿ ಎಚ್ಚರದಿಂದ ಇರಿ. ಪ್ರಯಾಣ ಕಾಲದಲ್ಲಿ ಸಹ ಜಾಗ್ರತೆಯಿಂದ ಇರಬೇಕು. ಪ್ರಮುಖ ಹಣಕಾಸಿನ ವ್ಯವಹಾರವನ್ನು ಮುಂದೂಡುವುದು ಒಳಿತು.

 

ಒಣ ವಾದ, ವಿವಾದದಿಂದ ಜನರನ್ನು ಗೆಲ್ಲಲು ಆಗುವುದಿಲ್ಲ. ನಿಮ್ಮ ಬುದ್ಧಿಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ವ್ಯಯಿಸಿದರೆ ನೀವೊಬ್ಬ ಅದ್ಭುತ ವ್ಯಕ್ತಿ ಎನಿಸಿಕೊಳ್ಳುವಿರಿ ಮತ್ತು ಸಮಾಜದಲ್ಲಿ ಹೆಚ್ಚಿನ ಗೌರವಾದರಗಳು ಕಂಡುಬರುವವು.

 

 

ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭವಿದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರವಾಗುವುದು.

 

 

ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯ ಗೆಲ್ಲುವ ಚಾಕಚಕ್ಯತೆ ತೋರಿ. ಹಾಗಾಗಿ ಶಾಂತಿಯಿಂದ ಕಾರ್ಯ ನಿರ್ವಹಿಸಿ.

 

ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹೋದರ, ಸಹೋದರಿಯರು ಸಹಾಯ ಮಾಡುವರು. ಆದಾಗ್ಯೂ ಮನಸ್ಸಿನ ಅವ್ಯಕ್ತ ಭಯ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ನಿಮ್ಮನ್ನು ಜನರು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕುವಿರಿ.

 

ಸ್ವಾಭಿಮಾನ ಮತ್ತು ದುರಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಿದೆ. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.

 

ಮುಂದಿನ ದಿನಗಳ ಬಗೆಗಿನ ಮುಂದಾಲೋಚನೆ ಬೇಡವೆಂದಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಈ ದಿನದ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬೇಕೆನ್ನುವುದರ ಬಗ್ಗೆ ಚಿಂತಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top