ನೀರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಕಿತಾಪತಿ ತೆಗೆಯುವುದು ತಮಿಳುನಾಡಿಗೆ ಹೊಸ ವಿಚಾರವೇನಲ್ಲ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೊತ್ತಿಕೊಂಡಿರುವ ಕಾವೇರಿ ಜಲವಿವಾದಕ್ಕೆ ಸುದೀರ್ಘವಾದೊಂದು ಇತಿಹಾಸವೇ ಇದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬೆನ್ನಲ್ಲೇ, ಇದೀಗ ಮೇಕೆದಾಟು ವಿವಾದ ಭುಗಿಲೆದ್ದಿದೆ.
ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ 9 ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಆದ್ರೆ ತಮಿಳುನಾಡು ಮಾತ್ರ, ಈ ಯೋಜನೆಗೆ ಸುತಾರಾಂ ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿದೆ. ಹೀಗಾಗಿ, ರಾಮನಗರ ಜಿಲ್ಲೆಯ ಒಂಟಿಗುಂಡ್ಲು ಬಳಿ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕಕ್ಕೆ ತಮಿಳು ನಾಡು ಅಡ್ಡಿಪಡಿಸುತ್ತಿದೆ..
ಮೇಕೆದಾಟು ಯೋಜನೆ ಕರ್ನಾಟಕ ಕೈಬಿಡುವ ಪ್ರಶ್ನೆಯೇ ಇಲ್ಲ
ಇಂದು ಮಾನ್ಯ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆ ಮುಖ್ಯವಾಗಿ ಬೆಂಗಳೂರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ ರೂಪಿಸಿದ್ದು ಸೆಂಟ್ರಲ್ ವಾಟರ್ ಕಮಿಷನ್ ಹಾಗು ಜಲಶಕ್ತಿಯ ದ್ವಂದ್ವ ನೀತಿಗಳಿಂದಾಗಿ #Kannada #Kannadiga #Karnataka pic.twitter.com/iSENekdKx2— GC ChandraShekhar (@GCC_MP) August 9, 2021
ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಸಂಸದ ಜಿಸಿ ಚಂದ್ರಶೇಖರ್ ಅವರು ಆಗ್ರಹಿಸಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಪತ್ರದ ಮುಖೇನ ಮನವಿ ಮಾಡಿದ್ದಾರೆ.
ಜಿಸಿ ಚಂದ್ರಶೇಖರ್ ಟ್ವೀಟ್ :
“ಮೇಕೆದಾಟು ಯೋಜನೆ ಕರ್ನಾಟಕ ಕೈಬಿಡುವ ಪ್ರಶ್ನೆಯೇ ಇಲ್ಲ !
ಇಂದು ಮಾನ್ಯ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆ ಮುಖ್ಯವಾಗಿ ಬೆಂಗಳೂರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ ರೂಪಿಸಿದ್ದು ಸೆಂಟ್ರಲ್ ವಾಟರ್ ಕಮಿಷನ್ ಹಾಗು ಜಲಶಕ್ತಿಯ ದ್ವಂದ್ವ ನೀತಿಗಳಿಂದಾಗಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಎಂದು ಸಂವಿಧಾನದಲ್ಲಿ ಹೇಳಿದ್ದರು ಇದನ್ನು ರಾಜಕೀಯ ಹಾಗು ಪ್ರತಿಷ್ಠೆಯ ವಿಚಾರವಾಗಿ ರೂಪತಳೆದು ಸಾಮಾನ್ಯ ಜನರು ಕಷ್ಟಪಡುವಂತಾಗಿದೆ.
“ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಹ ಇಚ್ಛಾಶಕ್ತಿಯ ಕೊರತೆಯಿಂದ ಹಾಗು ಕರ್ನಾಟಕ,ತಮಿಳು ನಾಡು ಎರಡು ರಾಜ್ಯಗಳ ನಡುವಿನ ತೊಂದರೆ ನಿವಾರಿಸುವ ಬದಲು ಅದನ್ನೇ ರಾಜಕೀಯದ ಸರಕು ಮಾಡಿಕೊಳ್ಳುತ್ತಿರುವ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸಿ ಕಾನೂನಾತ್ಮಕವಾಗಿ ಕರ್ನಾಟಕ ತನ್ನ ನಿಲುವಿನಲ್ಲಿ ಬದ್ಧವಾಗಿದೆ ಆದಷ್ಟು ಬೇಗನೆ ಕೇಂದ್ರ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಕಾಯಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದೇನೆ.” ಎಂದು ಜಿಸಿ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಇತ್ತೀಚಿಗೆ ಮೇಕೆದಾಟು ಯೋಜನೆಯ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆ ವೇಳೆಯಲ್ಲೂ ಸಂಸದ ಜಿಸಿ ಚಂದ್ರಶೇಖರ್ ಅವರು ಅಣ್ಣಾಮಲೈ ವಿರುದ್ಧ ಆಕ್ರೋಶಗೊಂಡಿದ್ದರು. ಮತ್ತು ಮೇಕೆದಾಟು ಯೋಜನೆಯನ್ನು ಕೈಬಿಡಬಾರದು ಎಂದು ಕರ್ನಾಟಕ ಸರ್ಕಾರವನ್ನು ಎಚ್ಚರಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
