fbpx
ಸಮಾಚಾರ

ಆಗಸ್ಟ್ 11: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 11, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತೃತೀಯಾ 4:53 pm
ನಕ್ಷತ್ರ : ಪುಬ್ಬ 9:31 am
ಯೋಗ : ಶಿವ 6:28 pm
ಕರಣ : ಗರಿಜ 4:53 pm ವಾಣಿಜ 4:10 am

Time to be Avoided
ರಾಹುಕಾಲ : 12:24 pm – 1:58 pm
ಯಮಗಂಡ : 7:44 am – 9:17 am
ದುರ್ಮುಹುರ್ತ : 11:59 am – 12:49 pm
ವಿಷ : 4:32 pm – 6:05 pm
ಗುಳಿಕ : 10:51 am – 12:24 pm

Good Time to be Used
ಅಮೃತಕಾಲ : 1:52 am – 3:25 am

Other Data
ಸೂರ್ಯೋದಯ : 6:06 am
ಸುರ್ಯಾಸ್ತಮಯ : 6:42 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಸಿಂಹ upto 15:23

 

 

 

ಉದಾಸೀನತೆಯೇ ಅಧೋಗತಿಗೆ ಮೂಲ ಎಂದರು ಹಿರಿಯರು. ಹಾಗಾಗಿ ಹಿರಿಯರ ಮಾತನ್ನು ಉಡಾಫೆಯಿಂದ ತಿರಸ್ಕರಿಸಿದಲ್ಲಿ ಸೋಲು ಕಾಣುವಿರಿ. ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲವಾದ್ದರಿಂದ ಚಿಕ್ಕ ಮಗು ಹೇಳಿದ ಮಾತನ್ನು ಕೇಳಬೇಕಾದೀತು.

ಚಂಚಲ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ ್ಮ ಪ್ರವೃತ್ತಿಯವರು. ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವು ಅನುಭವಿಸುವಿರಿ.

 

ಹಿರಿಯರು ಮತ್ತು ಬಂಧುಗಳಿಂದ ಉತ್ತಮ ಬೆಂಬಲ ಲಭ್ಯವಾಗಲಿದೆ. ಇಡೀ ದಿನ ಉಲ್ಲಾಸದಿಂದ ಇರುವಿರಿ. ಮಕ್ಕಳು ನಿಮ್ಮ ಸಂತೋಷ ಇಮ್ಮಡಿಗೊಳಿಸುವರು. ಬರಬೇಕಾಗಿದ್ದ ಬಾಕಿ ಹಣ ಕೈ ಸೇರುವುದು.

ಮುನ್ನುಗ್ಗುವ ವ್ಯಕ್ತಿಯನ್ನು ಕೀಟಲೆ ಮಾಡಿ ಅವನಿಗೆ ಅಡೆತಡೆ ಉಂಟು ಮಾಡುವಂಥ ಜನರು ನಿಮ್ಮ ಸುತ್ತಮುತ್ತ ಇರುವರು. ಅಂಥವರ ಹಾವಭಾವ ಮತ್ತು ಮಾತುಕತೆಗೆ ಉತ್ತರ ಕೊಡದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.

 

ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಆದರೆ ನೀವು ಚಿತ್ತಚಾಂಚಲ್ಯಕ್ಕೆ ಒಳಗಾಗದೆ ದೃಢ ಚಿತ್ತದಿಂದ ಕಾರ್ಯ ನಿರ್ವಹಿಸಬೇಕಾಗುವುದು.

 

ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿ ಕಂಡು ಇತರರು ಕುರುಬುವರು ಮತ್ತು ನಿಮ್ಮ ಪ್ರಯತ್ನ ಗಳನ್ನು ವಿಫಲಗೊಳಿಸಲು ಅನೇಕ ರೀತಿ ಕಾರ್ಯತಂತ್ರವನ್ನು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.

 

 

ತಲೆ ಗಟ್ಟಿ ಇದೆ ಎಂದು ಯಾರೂ ಬಂಡೆಗೆ ಚಚ್ಚಿಕೊಳ್ಳುವುದಿಲ್ಲ. ಅಂತೆಯೇ ಎಲ್ಲಾ ವಿಷಯಗಳಲ್ಲೂ ಯಶಸ್ಸು ಹೊಂದುತ್ತೇನೆ ಎಂಬ ಭ್ರಮೆ ಬೇಡ. ತಗ್ಗಿ, ಬಗ್ಗಿ ನಡೆದಲ್ಲಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.

 

 

ನಿಮ್ಮ ಪ್ರಯತ್ನಗಳಿಗೆ ಸದ್ಯ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.

 

ನೀವು ಸಣ್ಣಪುಟ್ಟ ಅನಾರೋಗ್ಯ ಎದುರಿಸಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ಇರಲಿ. ಕುಲದೇವತೆ ಪ್ರಾರ್ಥನೆ ಮಾಡುವುದು ಒಳ್ಳೆಯದು. ಮನಸ್ಸಿನ ದುಗುಡಗಳು ಕಡಿಮೆ ಆಗುವವು.

ಯಾವುದೇ ರೀತಿ ಅಡ್ಡಮಾರ್ಗ ಹಿಡಿಯದಿರಿ ಮತ್ತು ಅಡ್ಡದಾರಿ ಬಗ್ಗೆ ಯೋಚನೆ ಮಾಡದಿರಿ. ನೇರವಾದ ಮಾರ್ಗ ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

 

ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚ ಎದುರಾಗುವುದು. ಸದ್ಯದರಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಆನಂದ ಮೂಡುತ್ತದೆ. ತಾಳ್ಮೆಯಿಂದ ಇರಿ.

 

ನಿಮ್ಮ ಬಂಧುವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈ ಬಗ್ಗೆ ಅನಗತ್ಯ ಭಯ ಬೇಡ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top