fbpx
ಸಮಾಚಾರ

ಶಾಕಿಂಗ್: ಟಿ-20 ವಿಶ್ವಕಪ್​ಗೆ ನ್ಯೂಜಿಲೆಂಡ್ ತಂಡ ಪ್ರಕಟ: ತಂಡದಲ್ಲಿ ಸ್ಟಾರ್ ಆಟಗಾರನೇ ಇಲ್ಲ

ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಕಾವು ಶುರುವಾಗಿದೆ. ಮುಂದಿನ ತಿಂಗಳು ಐಪಿಎಲ್ ಆರಂಭವಾಗಲಿದ್ದು, ಇದು ಮುಕ್ತಾಯವಾದ ಬಳಿಕ ಅಕ್ಟೋಬರ್ 17 ರಿಂದ ಯುಎಇನಲ್ಲಿ ಚುಟುಕು ಸಮರಕ್ಕೆ ಚಾಲನೆ ಸಿಗಲಿದೆ.

ಈ ಸಂದರ್ಭದಲ್ಲಿ ಯುಎಇನಲ್ಲಿ ಆಯೋಜನೆಯಾಗಿರುವ ಈ ಬಾರಿಯ ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ತನ್ನ 15 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ತಂಡದಿಂದ ದಿಗ್ಗಜ ಆಟಗಾರನಿಗೆ ನ್ಯೂಜಿಲೆಂಡ್ ತಂಡ ಕೊಕ್ ನೀಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ

 

 

ಹೌದು, ನ್ಯೂಜಿಲೆಂಡ್‌ನ ವಿಶ್ವಕಪ್‌ನ ತಂಡದಿಂದ ಹೊರಬಿದ್ದಿರುವ ದಿಗ್ಗಜ ಆಟಗಾರ ಬೇರೆ ಯಾರೈ ಅಲ್ಲ ಅದು ರಾಸ್ ಟೇಲರ್. ನ್ಯೂಜಿಲೆಂಡ್ ಪರವಾಗಿ ಅನೇಕ ದಾಖಳೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಟೇಲರ್ ನ್ಯೂಜಿಲೆಂಡ್ ತಂಡದ ಪರವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಆದರೆ ಅವರು ಮುಂಬರುವ ಟಿ20 ವಿಶ್ವಕಪ್‌ನ ತಂಡದಿಂದ ಹೊರಬಿದ್ದಿದ್ದಾರೆ.

ನ್ಯೂಜಿಲ್ಯಾಂಡ್ ತಂಡ ಈ ರೀತಿ ಇದೆ:
ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್​ಲ್ಲೇ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮಾನ್, ಡೆವನ್ ಕನ್ವೇ, ಲೂಕಿ ಫರ್ಗುಸನ್, ಮಾರ್ಟಟಿನ್ ಗಪ್ಟಿಲ್, ಕೈಲ್ ಜೆಮಿಸನ್, ಡ್ಯಾರೆಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೈಫೆರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥೀ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top