fbpx
ಸಮಾಚಾರ

ಶಾಕಿಂಗ್ ನ್ಯೂಸ್: ಖ್ಯಾತ ನಟಿ ಶರಣ್ಯಾ ಶಶಿ ನಿಧನ

ಮಲಯಾಳಂ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟಿ ಶರಣ್ಯಾ ಶಶಿ ಅವರು ಸೋಮವಾರ (ಆ.9) ಮಧ್ಯಾಹ್ನ ನಿಧನರಾದರು ಎಂಬ ಕಹಿ ಸುದ್ದಿ ಕೇಳಿಬಂದಿದೆ. ಕ್ಯಾನ್ಸರ್, ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಶರಣ್ಯ ಶಶಿ ಇಂದು ಸಾವನ್ನಪ್ಪಿದ್ದಾರೆ.

35 ವರ್ಷದ ನಟಿ ಶರಣ್ಯಗೆ 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಬಳಿಕ ಹಲವು ಬಾರಿ ನಟಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು ಮತ್ತು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ಕ್ಯಾನ್ಸರ್ ವಿರುದ್ಧ ನಟಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲಾಗಿತ್ತು.

ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಶರಣ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೆಂಟಿಲೇಟರ್ ಐಸಿಯುನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಜೂನ್ ನಲ್ಲಿ ಕೆಲ ದಿನಗಳ ಕಾಲ ಐಸಿಯುನಿಂದ ಹೊರಬಂದಿದ್ದರು. ಆದರೆ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಪುನಃ ದಾಖಲಾಗಿದ್ದರು. ಅಂತಿಮವಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

ಅಂದಹಾಗೆ ಹರಿಚಂದನಮ್​, ಸೀತಾ ಮುಂತಾದ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಮಲಯಾಳಂ ಕಿರುತೆರೆಯಲ್ಲಿ ಶರಣ್ಯಾ ತುಂಬ ಫೇಮಸ್​ ಆಗಿದ್ದರು. ಚೋಟಾ ಮುಂಬೈ, ಬಾಂಬೆ ಮುಂತಾದ ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳನ್ನೂ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top