fbpx
ಸಮಾಚಾರ

ಅರ್ಥ ಸಚಿವೆ ನಿರ್ಮಲ ಸೀತಾರಾಮನ್ ಮುಂದೆ ಕರ್ನಾಟಕಕ್ಕೆ ಸಂಬಂಧಿಸಿದ ಎರಡು ಮುಖ್ಯ ಬೇಡಿಕೆ ಇಟ್ಟ ಸಂಸದ ಜಿಸಿ ಚಂದ್ರಶೇಖರ್

ಕರ್ನಾಟಕ ಮತ್ತು ಕನ್ನಡಿಗರ ಸಮಸ್ಯೆಗಳ ಪರವಾದ ನಿರಂತರ ಹೋರಾಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಕರ್ನಾಟಕದ ಡೈನಾಮಿಕ್ ಸಂಸದ ಎಂದೇ ಖ್ಯಾತಿ ಗಳಿಸಿರುವ ಜಿ.ಸಿ ಚಂದ್ರಶೇಖರ್ ಅವರು ಸಂಸತ್ ಒಳಗೆ ಮತ್ತು ಹೊರಗೆ ಸದಾಕಾಲ ಕನ್ನಡನಾಡು, ಕನ್ನಡಿಗರ ಸಮಸ್ಯೆಗಳಿಗೆ ದನಿಯಾಗುತ್ತಾರೆ. ಈಗ ಎರಡು ಮುಖ್ಯ ಸಮಸ್ಯೆಗಳ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಜಿಸಿ ಚಂದ್ರಶೇಖರ್ ಭೇಟಿ ಮಾಡಿ ಚರ್ಚಿಸಿದ್ದಾರೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದಲ್ಲಿ ಮೋಸ ಹೋಗಿರುವ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವುದು ಮತ್ತು IBPS ನೋಟಿಫಿಕೇಶನ್ ಅನ್ನು 2014 ರ ಹಿಂದೆ ಇದ್ದಂತೆ ಮರಳಿ ತರುವ ಬಗ್ಗೆ ಜಿಸಿ ಚಂದ್ರಶೇಖರ್ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಎರಡೂ ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ,.

 

 

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ:
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಿಷಯವಾಗಿ ಸಂಸತ್ತ್ನಲ್ಲಿ ಅಂಗೀಕಾರವಾದ DICGC ಬಿಲ್ ನಿಂದ ಸಂಕಷ್ಟಕೊಳಗಾದ ಬ್ಯಾಂಕ್ ನಲ್ಲಿ 90 ದಿನಗಳ ಒಳಗೆ ಡೆಪಾಸಿಟರ್ಸ್ ಠೇವಣಿ ಇಂಪಡೆಯುವ ಅವಕಾಶ ಕಲ್ಪಿಸಿದ್ದರು ಕೂಡ ಬ್ಯಾಂಕ್ ನಲ್ಲಿ 17,000 ಕ್ಕೂ ಹೆಚ್ಚಿನ 5 ಲಕ್ಷಕ್ಕೂ ಹೆಚ್ಚಿನ ಠೇವಣಿ ಮಾಡಿದ್ದಲ್ಲದೆ ಹಣ ಮರಳಿ ಬರುತ್ತದೋ ಇಲ್ಲವೋ ಖಾತರಿಯು ಇಲ್ಲದೆ ಅದಕ್ಕೆ ಟ್ಯಾಕ್ಸ್ ಕಟ್ಟುತ್ತಿರುವ ಗ್ರಾಹಕರ ಸ್ಥಿತಿ ಚಿಂತಾಜನಕವಾಗಿದೆ CBI ವಿಚಾರಣೆ ಅಥವಾ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಗೆ(JPC) ಗೆ ಶಿಫಾರಸ್ಸು ಮಾಡಿ ನೊಂದ ಜನರ ಕಣ್ಣೀರು ಒರೆಸುವ ಪ್ರಯತ್ನ ಮಾಡಿ ಎಂದು ಜಿಸಿ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ..

 

 

ಐಬಿಪಿಎಸ್ ಹೋರಾಟದಲ್ಲಿ ಜಿಸಿ ಚಂದ್ರಶೇಖರ್:
ವರ್ಷಾಂತರಗಳಿಂದ ಕನ್ನಡಿಗರನ್ನು ಕಾಡುತ್ತಿರುವ #IBPSಮೋಸದ ಬಗ್ಗೆ ರಾಜ್ಯ ಸಭಾ ಸದಸ್ಯೆ ಜಿಸಿ ಚಂದ್ರಶೇಖರ್ ಮತ್ತೊಮ್ಮೆ ಕನ್ನಡಿಗರ ಪರವಾಗಿ ಬ್ಯಾಟ್ ಬೀಸಿದ್ದಾರೆ.. ಈ ಹಿಂದೆ ಸಂಸತ್ ನಲ್ಲಿ IBPS ವಿಚಾರವಾಗಿ ಧ್ವನಿಯೆತ್ತಿ ಕನ್ನಡಿಗರ ಹೋರಾಟಕ್ಕೆ ಕೈ ಜೋಡಿಸಿದ್ದ ಜಿಸಿ ಚಂದ್ರಶೇಖರ್ ಅಂದು ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರಿಗೆ ಈ ವಿಚಾರವಾಗಿ ಪತ್ರವನ್ನು ಕೂಡ ಬರೆದಿದ್ದರು. ತಿಂಗಳುಗಳ ಹಿಂದೆಯಷ್ಟೇ ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಇದೀಗ ಜಿಸಿಸಿ ಮತ್ತೊಮ್ಮೆ IBPS ವಿಚಾರವಾಗಿ ಮತ್ತೊಮ್ಮೆ ನಿರ್ಮಲ ಸೀತಾರಾಮನ್ ಅವರನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದಾರೆ.

2014 ಕ್ಕೂ ಹಿಂದಿನ ನಿಯಮಾವಳಿಗಳು ಪುನರ್‌ಜಾರಿಯಾಗುವುದರಿಂದ ಸ್ಥಳೀಯ ಭಾಷೆಯಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಪ್ರಯೋಜನವಾಗುತ್ತದೆ. ಬ್ಯಾಂಕ್‌ನ ಗ್ರಾಹಕರಿಗೂ ಸಹಕಾರಿಯಾಗುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಗ್ರಾಹಕರು ಗ್ರಾಮೀಣ ಪ್ರದೇಶದವರೇ ಆಗಿರುವುದರಿಂದ ಅವರೊಡನೆ ಸಂವಹನ ನಡೆಸಲು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕಗೊಳಿಸುವುದು ಹೆಚ್ಚು ಪ್ರಯೋಜನಾಕಾರಿ ಎಂದು ಜಿಸಿ ಚಂದ್ರಶೇಖರ್ ನಿರ್ಮಲ ಸೀತಾರಾಮನ್ ಅವರಿಗೆ ಈ ಹಿಂದೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top