fbpx
ಸಮಾಚಾರ

ಸಚಿವ ಆನಂದ್ ಸಿಂಗ್ ರಾಜೀನಾಮೆ? ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ

ಸರಕಾರ ರಚಿತವಾದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಕಂಟಕ ಎದುರಾಗಿದೆ. ಸಚಿವ ಸಂಪುಟ ರಚನೆಯೇ ಇದೀಗ ಬಿಜೆಪಿಗೆ ಮುಳುವಾಗಿ ಪರಿಣಮಿಸಿರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕೆಂದರೆ ತನಗೆ ಸಿಕ್ಕಿರುವ ಖಾತೆ ಬಗ್ಗೆ ಬೆಂಕಿಯುಗುಳುತ್ತಿದ್ದ ಆನಂದ್‌ ಸಿಂಗ್‌ ರಾಜೀನಾಮೆ ನೀಡಿರುವುದು ಇದೀಗ ಖಚಿತವಾಗುತ್ತಿದೆ

ಹೌದು…ತಾವು ಕೇಳಿದ್ದ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ್​​ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇವಲ ಸಚಿವ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ಆವರ ಆಪ್ತ ಮೂಲಗಳು ತಿಳಿಸಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಆನಂದ್ ಸಿಂಗ್ ಇದುವರೆಗೂ ವಿಧಾನಸಭೆಗೆ ಕಾಲಿಟ್ಟಿಲ್ಲ. ಅಲ್ಲದೇ ವಿಜಯನಗರ ಶಾಸಕರ ಕಚೇರಿಯನ್ನು ಸಹ ಆನಂದ್ ಸಿಂಗ್ ಖಾಲಿ ಮಾಡಿದ್ದು, ಇಲ್ಲಿ ಶಾಸಕರು ಲಭ್ಯವಿಲ್ಲ ಎಂದು ಬೋರ್ಡ್‌ ಸಹ ಹಾಕಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ಕ್ಷೇತ್ರದಲ್ಲಿರೋ ಶಾಸಕ ಆನಂದ್ ಸಿಂಗ್ ಕಚೇರಿಯಲ್ಲಿ ಇಷ್ಟು ದಿನ ಪ್ರವೇಶ ದ್ವಾರದಲ್ಲಿ ಶಾಸಕರ ಕಾರ್ಯಾಲಯ ಅನ್ನುವ ಬೃಹತ್ ಬೋರ್ಡ್ ರಾರಾಜಿಸುತ್ತಿತ್ತು. ಆದರೆ ಮಂಗಳವಾರ ಸಂಜೆ ಆನಂದ್ ಸಿಂಗ್ ಕಚೇರಿ ಎದುರು ಕ್ರೇನ್ ಪ್ರತ್ಯಕ್ಷವಾಗಿ, ಕ್ಷಣ ಮಾತ್ರದಲ್ಲಿ ಆನಂದ್ ಸಿಂಗ್ ಕಚೇರಿಯ ಶಾಸಕರ ಕಾರ್ಯಾಲಯ ನಾಮಫಲಕ ಕೆಳಕ್ಕಿಳಿಸಲಾಗಿದೆ. ಇದು ಸಚಿವ ಸ್ಥಾನದ ಜೊತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಮುನ್ಸೂಚನೆಯಾಗಿದೆ.

ಮೈತ್ರಿ ಸರ್ಕಾರದಲ್ಲೂ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ನೇರ ನಡೆಯ ವ್ಯಕ್ತಿ. ಯಡಿಯೂರಪ್ಪ ಸರ್ಕಾರದಲ್ಲಿ ಅವರು ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಮುಖ ಬೇಡಿಕೆ ಇಟ್ಟಿದ್ದರು. ಅದು ಈಡೇರಿದ್ದರಿಂದ ತಾನು ಪಕ್ಷ ನೀಡಿದ ಖಾತೆಯನ್ನ ಒಪ್ಪಿಕೊಂಡು ಕೆಲಸ ಮಾಡಿದ್ದೆ. ಈಗಲೂ ತಾನು ಕೇಳಿದ ಖಾತೆ ಯಾಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಾನೇನು ಪಕ್ಷಕ್ಕೆ ಕೆಲಸ ಮಾಡಿಲ್ಲವಾ? ಸರ್ಕಾರ ಬರಲು ಶ್ರಮಿಸಿಲ್ಲವಾ ಎಂದು ಆನಂದ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top