fbpx
ಸಮಾಚಾರ

ಕನ್ನಡದಲ್ಲಿ ಶುರು ಹೊಸ ಬಿಗ್​ ಬಾಸ್: ಮತ್ತೆ 6 ದಿನದ ವಿಶೇಷ ಬಿಗ್‌ಬಾಸ್‌ ಶೋಗೆ ಕ್ಷಣಗಣನೆ

ಬಿಗ್‌ಬಾಸ್‌ ಸೀಸನ್‌ 8 ಸೆಕೆಂಡ್‌ ಇನ್ನಿಂಗ್ಸ್ ಇದೀಗ ತಾನೇ ಮುಗಿದಿದೆ. ಆದರೆ ಕಲರ್ಸ್ ಕನ್ನಡ ಚಾನೆಲ್‌ ಇನ್ನೂ ಬಿಗ್‌ಬಾಸ್ ಕನಸಿಂದ ಹೊರಬಂದಿಲ್ಲ. ಇದೀಗ ಕನ್ನಡತಿ ಹರ್ಷ ಪಾತ್ರಧಾರಿ ಕಿರಣ್‌ ರಾಜ್‌, ನಿರೂಪಕ ಅಕುಲ್‌ ಬಾಲಾಜಿ ಸೇರಿ ಹಲವು ಕಿರುತೆರೆ ಸೆಲೆಬ್ರಿಟಿಗಳ ಮತ್ತೊಂದು ಟೀಮ್‌ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದೆ.

ಹಾಗಂದ ಮಾತ್ರಕ್ಕೆ ಇದು ಹೊಸ ಸೀಸನ್ ಅಲ್ಲ. ಈ ಹಿಂದೆ ಬಿಗ್ ಬಾಸ್ ಕನ್ನಡದ ಏಳು ಸೀಸನ್‌ಗಳ ರೀತಿಯಲ್ಲಿ ಈ ಕಾರ್ಯಕ್ರಮ ಇರೋದಿಲ್ಲ. 15 ಸ್ಪರ್ಧಿಗಳು 6 ದಿನಗಳ ಕಾಲ ಮಾತ್ರ ಈ ಮನೆಯಲ್ಲಿ ಇರಲಿದ್ದಾರೆ. ಧಾರಾವಾಹಿ ನಟ-ನಟಿಯರು ವೀಕ್ಷಕರಿಗೆ ತುಂಬ ಹತ್ತಿರ ಆಗುತ್ತಾರೆ. ಎಲ್ಲರೂ ಕಲರ್ಸ್ ವಾಹಿನಿಯ ನಟ-ನಟಿಯರಾಗಿದ್ದರಿಂದ ವೀಕ್ಷಕರಿಗೆ ಈ ಕಾರ್ಯಕ್ರಮ ಇನ್ನಷ್ಟು ಇಷ್ಟ ಆಗಬಹುದು.

 

 

ಆರು ದಿನಗಳ ಕಾಲ ನಡೆಯೋ ಈ ಶೋನಲ್ಲಿ, ಹಿಂದಿನ ಬಿಗ್ ಬಾಸ್‌ನಲ್ಲಿ ಇದ್ದಂತೆ, ಮನೆಯೊಳಗೆ ಆಟ, ಕಿತ್ತಾಟ, ಮುದ್ದಾಟ ಎಲ್ಲನೂ ಇರುತ್ತಾ, ದೊಡ್ಡ ಬಿಗ್‌ಬಾಸ್ ಶೋ ಥರ ಈ ಶೋ ಸಹ ಜನರ ಮನರಂಜಿಸುತ್ತಾ ಅನ್ನೋ ಪ್ರಶ್ನೆಗಳೆಲ್ಲ ಪ್ರೇಕ್ಷಕರ ಮುಂದಿವೆ. ಸುಮಾರು 15 ಜನ ಸೆಲೆಬ್ರಿಟಿಗಳಿರೋ ಈ ಶೋ ಶನಿವಾರ ಗ್ರ್ಯಾಂಡ್‌ ಓಪನಿಂಗ್ ಕಾಣಲಿದೆ ಅಂತ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.

ಸದ್ಯ ಸೀರಿಯಲ್, ನಿರೂಪಣೆ ಮೂಲಕ ಗಮನ ಸೆಳೆಯುತ್ತಿರುವ ಕಿರಣ್‌ರಾಜ್‌, ಅಭಿನವ್‌, ಕೌಸ್ತುಭ, ನಯನಾ, ಚಂದನಾ, ನಿರೂಪಕ ಅಕುಲ್‌ ಬಾಲಾಜಿ ಸೇರಿ 15 ಜನ ಇದ್ದಾರೆ. ಮನೆಯೊಳಗೆ ಇವರ ಜೋಶ್, ಸರ್ಕಸ್‌ಗೆ ಕ್ಷಣಗಣನೆ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top