fbpx
ಸಮಾಚಾರ

ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ: ಅಸಲಿ ಸತ್ಯ ಬಿಚ್ಚಿಟ್ಟ ಸುದೀಪ್!

ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಯ ವೇದಿಕೆಯಲ್ಲಿ ಸುದೀಪ್ ಅವರು ವೀಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ. ಹೌದು ಬಿಗ್‍ಬಾಸ್‍ನಲ್ಲಿ ಟೆಲಿಕಾಸ್ಟ್‌ನಲ್ಲಿ ಆಗಿರುವ ಒಂದು ಎಡವಟ್ಟಿಗೆ ಸುದೀಪ್ ಅವರು ವೀಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ.

ಮೊನ್ನೆ ಅಂದರೆ ಶನಿವಾರದ ಬಿಗ್ ಬಾಸ್ ಫಿನಾಲೆ ಎಪಿಸೋಡ್ ನೋಡಿದ ಬಹುತೇಕ ಜನರು ಅದರ ಮಧ್ಯ ಬರುತ್ತಿದ್ದ ಜಾಹೀರಾತನ್ನು ನೋಡಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರವನ್ನೂ ಹೊರಹಾಕಿದ್ದರು. ಆದರೆ, ಬಿಗ್ ಬಾಸ್​ ಎಪಿಸೋಡ್​ನಲ್ಲಿ ವಿಪರೀತ ಜಾಹೀರಾತುಗಳು ಇದ್ದುದಕ್ಕೆ ಹಾಗೂ ಎಪಿಸೋಡ್ ಮುಗಿಯುವುದು ತಡರಾತ್ರಿಯಾಗಿದ್ದಕ್ಕೆ ಕಾರಣವೇನೆಂಬ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಇಂದಿನ ಎಪಿಸೋಡ್​ನಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಬಿಗ್​ ಬಾಸ್​ ಫಿನಾಲೆ ಎಪಿಸೋಡ್​ಗಳನ್ನು ಪ್ರಸಾರವಾಗುವುದಕ್ಕಿಂತ ಮೂರ್ನಾಲ್ಕು ಗಂಟೆ ಮೊದಲೇ ಶೂಟಿಂಗ್ ಮಾಡಲಾಗುತ್ತದೆ. ಬಳಿಕ ಅದನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತದೆ. ಶನಿವಾರ ಬಿಗ್ ಬಾಸ್ ಶೂಟಿಂಗ್ ಸೆಟ್​ನಲ್ಲಿ ಇಂಟರ್ನೆಟ್​ ಸಮಸ್ಯೆ ಇದ್ದುದರಿಂದ ಶೂಟ್ ಮಾಡಲಾದ ಎಪಿಸೋಡ್​ಗಳನ್ನು ಟೆಕ್ನಿಕಲ್ ಟೀಂನವರು ನೊಯ್ಡಾಗೆ ಕಳುಹಿಸಬೇಕು. ಅಲ್ಲಿಂದ ಬಂದಮೇಲೂ ಕೆಲವು ಕೆಲಸಗಳಿರುತ್ತವೆ. ಇದರಿಂದ ನಿನ್ನೆಯ ಎಪಿಸೋಡ್​ನಲ್ಲಿ ಸ್ವಲ್ಪ ಸಮಸ್ಯೆಯಾಯಿತು.

ಈ ಯಾವುದೇ ಒಂದು ಕಡೆ ಸಣ್ಣ ತಪ್ಪುಗಳಾದ್ರೂ ಕೂಡ ಬಿಗ್‍ಬಾಸ್ ವೀಕ್ಷಿಸುತ್ತೀರುವ ನಿಮಗೆ ಖಂಡಿತ ತೊಂದರೆಯಾಗುತ್ತದೆ. ನಿನ್ನೆ ಇನ್‍ಟರ್‍ನೆಟ್ ಸಮಸ್ಯೆಯಿಂದಾಗಿ ಕಾರ್ಯಕ್ರಮ ಪ್ರಸಾರವಾಗುದುದು ತಡವಾಯಿತು. ಆದರೆ ಈ ವಿಳಂಬವನ್ನು ತಾವುಗಳು ಬೇಜಾರು ಇಲ್ಲದೆ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಿ. ಈ ಸಮಸ್ಯೆ ನಮ್ಮೆಲ್ಲರ ನಿಯಂತ್ರಣವನ್ನು ಮೀರಿ ನಡೆದಿದ್ದಾಗಿದೆ. ಇಷ್ಟಾದರೂ ಕೂಡಾ ತಾವೆಲ್ಲರೂ ಕೊನೆಯವರೆಗೂ ಬಹಳ ಪ್ರಿತಿಯಿಂದ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಿ ನಮ್ಮ ಕಡೆಯಿಂದ ಧನ್ಯವಾದಗಳು. ತೊಂದರೆಗೆ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top