fbpx
ಸಮಾಚಾರ

ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ

ಮೂಡಿಗೆರೆ ತಾಲೂಕನ್ನು ಅತಿವೃಷ್ಟಿಯ ಪಟ್ಟಿಗೆ ಸೇರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧವೇ ಶಾಸಕ ಎಂಪಿ ಕುಮಾರಸ್ವಾಮಿಯವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ.

ನಮ್ಮ ಬೇಡಿಕೆಗಳಿಗೆ ಸರ್ಕಾರ ಏಕೋ ಗಮನವೇ ಹರಿಸುತ್ತಿಲ್ಲ, ಅದು ಮೀಸಲು(ರಿಸರ್ವೇಶನ್) ಕ್ಷೇತ್ರವೆಂಬ ಕಾರಣಕ್ಕೋ ಏನೋ ಕಡೆಗಣಿಸ್ತಿದ್ದಾರೆ ಎಂದು ಕುಮಾರಸ್ವಾಮಿ ನೊಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

2019ರಲ್ಲಿ ನಮ್ಮ ನಮ್ಮ ತಾಲ್ಲೂಕು ಸೇರಿದಂತೆ ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿಯಾಯಿತು, 6 ಮಂದಿ ಮನೆ ಸಮೇತ ಕೊಚ್ಚಿಕೊಂಡು ಹೋಗಿ ಶವ ಹುಡುಕಲು ಹತ್ತಾರು ದಿನವಾಯಿತು. ಪರಿಹಾರ ಕೊಡಿ ಎಂದು ಸರ್ಕಾರಕ್ಕ ಕೇಳಿಕೊಂಡರೂ ಅತ್ಯಂತ ನಿರ್ಲಕ್ಷ್ಯ ಮಾಡಿದರು. ಕಳೆದ ವರ್ಷ ಕೂಡ ನಮ್ಮ ತಾಲ್ಲೂಕಿನ ಜನರಿಗೆ ಮಳೆಹಾನಿಯಿಂದ ಹಲವು ಸಂಕಷ್ಟ ಎದುರಾಯಿತು, ಬೇರೆ ಕ್ಷೇತ್ರಗಳಿಗೆ ಸರ್ಕಾರ ಪರಿಹಾರ ನೀಡಿದ್ದರೂ ನಮ್ಮ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂದರು.

ನಮ್ಮದೇ ಸರ್ಕಾರ ಈ ರೀತಿ ತಾರತಮ್ಯ ಮಾಡಬಾರದು. ನಮ್ಮದು ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅನಿಸುತ್ತಿದೆ. ಸಚಿವ ಆರ್.ಅಶೋಕ್ ಈ ರೀತಿ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಸಚಿವರು ಭೇಟಿ ನೀಡ್ತಾರೆ, ಏನೂ ಮಾಡಲ್ಲ. ಇವರಿಗೆ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ, ಹೀಗಾಗಿ ಧರಣಿ ಕುಳಿತಿರುವೆ ಎಂದು ವಿಧಾನಸೌಧದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top