fbpx
ಸಮಾಚಾರ

ಪತಿಯ ಸಾವಿನ ನೋವಿನಲ್ಲಿರುವ ಮಾಲಾಶ್ರೀ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ಕೊಟ್ಟ ಮಕ್ಕಳು

ಪತಿ ರಾಮು ಅವರ ಅಕಾಲಿಕ ನಿಧನದ ನೋವಿನಿಂದ ಇನ್ನೂ ಹೊರ ಬಾರದ ನಟಿ ಮಾಲಾಶ್ರೀ ಅವರು ರಾಮು ಅವರ ನೆನಪಿನಲ್ಲೇ ದಿನ ಕಳೆಯುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖದಲ್ಲಿರುವ ಮಾಲಾಶ್ರೀ ಅವರು ಈ ಸಲ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿಲ್ಲ.

ಇನ್ನು, ಅಮ್ಮನ ಹುಟ್ಟುಹಬ್ಬದಂದು ಅವರ ಮುಖದಲ್ಲಿ ನಗು ಮೂಡಿಸಲು ಮಾಲಾಶ್ರೀ ಅವರಿಗೆ ಒಂದು ಮುದ್ದಾದ ಉಡುಗೊರೆ ಕೊಟ್ಟಿದ್ದಾರೆ. ಮಾಲಾಶ್ರೀಗೆ ಹುಟ್ಟುಹಬ್ಬದಂದು ಅವರ ಮಕ್ಕಳು ನೀಡಿದ ಆ ಉಡುಗೊರೆ ಏನು ಅಂತೀರಾ? ಮುಂದೆ ಓದಿ.

 

 

ಮಾಲಾಶ್ರೀ ಹುಟ್ಟುಹಬ್ಬದಂದು ಮುದ್ದಾದ ನಾಯಿ ಮರಿಯನ್ನು ಮಕ್ಕಳು ಗಿಫ್ಟ್​ ಆಗಿ ನೀಡಿದ್ದಾರೆ. ಬಘೀರ ಅನ್ನೋ ಹೆಸರಿನ ನಾಯಿ ಮರಿಯನ್ನ ಮಾಲಾಶ್ರೀ ಮಕ್ಕಳು ತನ್ನ ಅಮ್ಮನಿಗೆ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಮುದ್ದಾದ ನಾಯಿ ಮರಿಯನ್ನು ಎತ್ತಿಕೊಂಡು ಮಾಲಾಶ್ರೀ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮಾಲಾಶ್ರೀ ಅವರು, ಮಕ್ಕಳು ಪಿಟ್ಬುಲ್ ನಾಯಿಮರಿಯನ್ನು ಗಿಫ್ಟ್ ನೀಡಿದ್ದಾರೆ. ಬಘೀರ ಬೇಬಿಗೆ ಸ್ವಾಗತ ಎಂದು ಬರೆದುಕೊಂಡು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top