fbpx
ಸಮಾಚಾರ

ಸದ್ದಿಲ್ಲದೇ ಸುದ್ದಿಯಾಗದೆ ನಿಶ್ಚಿತಾರ್ಥ ಮಾಡಿಕೊಂಡ ಲೇಡಿ ಸೂಪರ್ ಸ್ಟಾರ್ ನಯನತಾರ

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಅವರ ಲವ್ ಸ್ಟೋರಿ ಬಗ್ಗೆ ಗೊತ್ತೇ ಇದೆ. ಈ ಸೆಲೆಬ್ರಿಟಿ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ನಯನತಾರಾ ತಮ್ಮ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಮಾಡಿದ್ದಾರೆ.

ತಮಿಳಿನ ಖಾಸಗಿ ವಾಹಿನಿಯ ಶೋವೊಂದರಲ್ಲಿ ನಟಿ ನಯನತಾರಾ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಸದ್ಯ ಬಿಡುಗಡೆಯಾಗಿದೆ. ಎಂಗೇಜ್‌ಮೆಂಟ್ ರಿಂಗ್ ಬಗ್ಗೆ ನಯನತಾರಾ ಮಾತಾಡಿರುವುದು ಪ್ರೋಮೋದಲ್ಲಿದೆ. ”ಇದು ಎಂಗೇಜ್‌ಮೆಂಟ್ ರಿಂಗ್” ಎಂದು ತಮ್ಮ ಎಡಗೈ ಬೆರಳಿಗೆ ತೊಟ್ಟಿರುವ ಚಿನ್ನದ ಉಂಗುರವನ್ನು ನಟಿ ನಯನತಾರಾ ತೋರಿಸಿದ್ದಾರೆ.

ವಿಘ್ನೇಶ್ ಶಿವನ್ ಅವರಲ್ಲಿ ನೀವು ಲೈಕ್ ಮಾಡುವ ಅಂಶಗಳೇನು ಎಂದು ನಿರೂಪಕಿ ಕೇಳಿದಾಗ, ”ಏನು ಇಷ್ಟ ಆಗಿದೆ ಅನ್ನೋದಕ್ಕಿಂತ ಎಲ್ಲವೂ ಇಷ್ಟವಾಗಿದೆ” ಎಂದು ನಯನತಾರಾ ಹೇಳಿದ್ದಾರೆ. ಆ ಮೂಲಕ ತಮಗೆ ನಿಶ್ಚಿತಾರ್ಥ ಆಗಿರುವುದನ್ನು ನಯನತಾರಾ ದೃಢಪಡಿಸಿದ್ದಾರೆ. ವಿಘ್ನೇಶ್ ಶಿವನ್ ಜೊತೆಗೆ ಎಂಗೇಜ್ ಆಗಿರುವ ವಿಚಾರವನ್ನು ನಯನತಾರಾ ಖಚಿತ ಪಡಿಸಿದ್ದಾರೆ.

ಮದುವೆ ಯಾವಾಗ ಎಂಬ ಬಗ್ಗೆ ಇತ್ತೀಚೆಗೆ ವಿಘ್ನೇಶ್​ ಶಿವನ್​ ಅವರಿಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ‘ಮದುವೆಗಾಗಿ ನಾನು ಮತ್ತು ನಯನತಾರಾ ಹಣ ಉಳಿತಾಯ ಮಾಡುತ್ತಿದ್ದೇವೆ. ಯಾಕೆಂದರೆ ಮದುವೆಗೆ ಹೆಚ್ಚು ಖರ್ಚಾಗಲಿದೆ. ಅಲ್ಲದೇ, ಕೊರೊನಾ ಪ್ರಕರಣ ಕಡಿಮೆ ಆಗಲಿ ಅಂತ ಕಾಯುತ್ತಿದ್ದೇವೆ’ ಎಂದು ಹೇಳಿದ್ದರು. ಆದರೆ ಎಂಗೇಜ್​​ಮೆಂಟ್​ ಆಗಿರುವ ಬಗ್ಗೆ ಅವರು ಬಾಯಿ ಬಿಟ್ಟಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top