fbpx
ಸಮಾಚಾರ

ಯಶ್-ರಾಧಿಕಾಗೆ ಇಂದು ವಿಶೇಷ ದಿನ: ವಿಡಿಯೋ ಶೇರ್ ಮಾಡಿ ರಾಕಿಂಗ್ ಸ್ಟಾರ್ ಪತ್ನಿ ಹೇಳಿದ್ದೇನು?

ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಎಂದೇ ಪ್ರಸಿದ್ಧರಾಗಿರುವ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿರ್ಥವಾಗಿ 5 ವರ್ಷಗಳು ಕಳೆದಿದ್ದು, ಈ ಬಗ್ಗೆ ಅದ್ಭುತ ವೀಡಿಯೋ ಹಂಚಿಕೊಂಡು, ನಿನ್ನೆಯಷ್ಟೇ ನಿಶ್ಚಿತಾರ್ಥವಾದಂತಿದೆ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

 

 

‘ಅದ್ಭುತ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಇಂದು 5 ವರ್ಷಗಳಾಗಿವೆ. ನನಗೆ ಆ ದಿನ ಇನ್ನೂ ನೆನಪಿದೆ. ಆ ಪರಿಪೂರ್ಣ ದಿನವನ್ನು ಮತ್ತೆ ಮೆಲುಕು ಹಾಕಲು ಈ ವಿಡಿಯೋವನ್ನು ಶೇರ್ ಮಾಡಿದ್ದೇನೆ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ವಿಶೇಷ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, 2016ರ ಆಗಸ್ಟ್ 12ರಂದು ತಾವಿಬ್ಬರು ಎಂಗೇಜ್ ಆಗುತ್ತಿರುವುದಾಗಿ ಘೋಷಣೆ ಮಾಡಿತ್ತು. ಗೋವಾದಲ್ಲಿ ಅದ್ದೂರಿಯಾಗಿ ಎಂಗೇಜ್‌ಮೆಂಟ್ ನಡೆದಿತ್ತು. ಕನ್ನಡ ಚಿತ್ರರಂಗದ ಅಂಬರೀಷ್, ರವಿಚಂದ್ರನ್ ಸೇರಿದಂತೆ ಘಟಾನುಘಟಿ ತಾರೆಯರು, ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದರು. ಎಂಗೇಜ್‌ಮೆಂಟ್ ನಡೆದ 4 ತಿಂಗಳ ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ಇದೀಗ ತಮ್ಮ ನಿಶ್ಚಿತಾರ್ಥಕ್ಕೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಳೆಯ ಎಂಗೇಜ್‌ಮೆಂಟ್ ವಿಡಿಯೋವನ್ನು ಮತ್ತೆ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top