fbpx
ಸಮಾಚಾರ

ತಪ್ಪು ಲೆಕ್ಕ ತೋರಿಸಿ ಪಾಲಿಕೆಗೆ ಕೋಟಿಗಟ್ಟಲೆ ವಂಚನೆ ಮಾಡಿದ್ರಾ ರಾಕ್ ಲೈನ್ ವೆಂಕಟೇಶ್? ನಿರ್ಮಾಪಕನ ವಿರುದ್ಧ ದೂರು ದಾಖಲು

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿಬಂದಿದೆ. ರಾಕ್ ಲೈನ್ ವೆಂಕಟೇಶ್ ತೆರಿಗೆ ವಂಚನೆ ಮಾಡಿರುವ ಕುರಿತ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ.

 

 

ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ ಅವರು, ಪಾಲಿಕೆಗೆ ಪಾವತಿಸಬೇಕಾಗಿದ್ದ ೮.೫ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಮತ್ತು ಪಿಐಡಿ ಸಂಖ್ಯೆಯನ್ನೇ ಬದಲಿಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ಮತ್ತು ಆತನ ಪತ್ನಿ ಪದ್ಮಕುಮಾರಿ ಬೃಹತ್ ವಂಚನೆಗೈದಿದ್ದಾರೆ ಎಂದು ದೂರಿದರು.

ರಾಕ್ ಲೈನ್ ಮಾಲ್​ನ 1,22,743 ಚದರ ಅಡಿ ವಿಸ್ತೀರ್ಣದ ಬದಲು 48,500 ಚದರ ಅಳತೆಯನ್ನು ಮಾತ್ರ ತೋರಿಸಿ 2012-13 ರಿಂದಲೂ 48500 ಚದರಡಿಗೆ ಮಾತ್ರ ತೆರಿಗೆ ಪಾವತಿ ಮಾಡಿ ಮೋಸ ಮಾಡಿದ್ದಾರೆ. 48500 ಚದರಡಿಗೆ ವಾರ್ಷಿಕ ಕೇವಲ 3,78,016 ರೂ. ಮಾತ್ರ ತೆರಿಗೆ ಪಾವತಿ ಮಾಡ್ತಿದ್ದ ರಾಕ್ ಲೈನ್ 74243 ಚದರಡಿ ವಿಸ್ತೀರ್ಣದ ಲೆಕ್ಕ ತೋರಿಸದೇ ಕೋಟಿಗಟ್ಟಲೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಎನ್​ಆರ್ ರಮೇಶ್ ದೂರು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top