fbpx
ಸಮಾಚಾರ

ಅವಕಾಶಗಳ ಕೊರತೆ; ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ನಾಯಕ ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ! ಅಮೆರಿಕಾ ಪರ ಆಡುವ ಒಲವು

19 ವರ್ಷದೊಳಗಿನ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಉನ್ಮುಕ್ತ್‌ ಚಾಂದ್‌, ಅಮೆರಿಕ ಪರ ಕ್ರಿಕೆಟ್‌ ಆಡುವ ಸಲುವಾಗಿ ತಮ್ಮ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಯುವ ಆಟಗಾರ ಚಂದ್, ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ವಿಶ್ವ ಮಟ್ಟದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಚಂದ್ ಉದ್ದ ಸಂದೇಶ ತಾನು ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ವಿಚಾರವನ್ನು ಉನ್ಮುಕ್ತ್ ಚಂದ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಉದ್ದ ಸಂದೇಶ ಬರೆದುಕೊಂಡಿರುವ ಚಂದ್ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವ ಒಂದೇ ಒಂದು ಕನಸಿನೊಂದಿಗೆ ನಾನು ಕ್ರಿಕೆಟ್ ಆಡಲು ಆರಂಭಿಸಿದೆ. ಆದರೆ ದೇಶದ ಪರ ಆಡಲು ಅವಕಾಶ ಸಿಕ್ಕಿಲ್ಲವಾದ್ದರಿಂದ ಅವಕಾಶಕ್ಕಾಗಿ ಬೇರೆಡೆ ಅರಿಸಿ ಹೋಗಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಒಂದು ಸಾರ್ವತ್ರಿಕ ಆಟ ಮತ್ತು ಅರ್ಥ ಬದಲಾಗಬಹುದು ಆದರೆ ಉದ್ದೇಶ ಯಾವಾಗಲೂ ಒಂದೇ ಆಗಿರುತ್ತದೆ. ಹಾಗೆಯೇ ನನ್ನ ಹೃದಯದಲ್ಲಿ ಯಾವಾಗಲೂ ನನಗೆ ಸ್ಥಾನ ನೀಡಿದ ನನ್ನ ಎಲ್ಲಾ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮಂತೆಯೇ ಜನರನ್ನು ಪ್ರೀತಿಸುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ. ಅಂತಹ ಜನರಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು ಮುಂದಿನ ಅಧ್ಯಾಯಕ್ಕೆ ಹೋಗೋಣ ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top