fbpx
ಸಮಾಚಾರ

ಆಗಸ್ಟ್ 14: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 14, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಷಷ್ಠೀ 11:50 am
ನಕ್ಷತ್ರ : ಚಿತ್ತ 6:56 am ಸ್ವಾತಿ 5:44 am
ಯೋಗ : ಶುಭ 11:12 am
ಕರಣ : ತೈತುಲ 11:50 am ಗರಿಜ 10:51 pm

Time to be Avoided
ರಾಹುಕಾಲ : 9:17 am – 10:50 am
ಯಮಗಂಡ : 1:57 pm – 3:30 pm
ದುರ್ಮುಹುರ್ತ : 6:10 am – 7:00 am, 7:00 am – 7:50 am
ವಿಷ : 12:15 pm – 1:46 pm
ಗುಳಿಕ : 6:10 am – 7:44 am

Good Time to be Used
ಅಮೃತಕಾಲ : 9:22 pm – 10:53 pm
ಅಭಿಜಿತ್ : 11:59 am – 12:49 pm

Other Data
ಸೂರ್ಯೋದಯ : 6:07 am
ಸುರ್ಯಾಸ್ತಮಯ : 6:41 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ತುಲ

 

 

 

ಯಾವಾಗಲು ಕೆಟ್ಟದೇ ಅಗುವುದಿಲ್ಲ. ಹಾಗಾಗಿ ಸದಾ ಋುಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ. ಇಂದಿನ ಕಾರ್ಯವು ದೈವದ ಸಹಾಯದಿಂದ ಪೂರ್ಣಗೊಳ್ಳುವವು.

ನೆರೆಹೊರೆಯವರು ಹೊರೆಯಾಗುವಂತಹ ಸನ್ನಿವೇಶದ ಸಾಧ್ಯತೆಗಳು ಅಧಿಕ. ಆದರೆ ನೀವು ನಿಮ್ಮತನ ಕಾಪಾಡಿಕೊಳ್ಳುವುದು ಒಳಿತು. ಮನೋಬಯಕೆಗಳು ಪೂರ್ಣಗೊಳ್ಳುವವು.

 

ಕೆಲವು ಸಂದರ್ಭದಲ್ಲಿ ಮಾತನಾಡಲೇ ಬೇಕಾಗುತ್ತದೆ. ಅಂತಹ ಸಮಯದಲ್ಲೂ ಮೌನ ವಹಿಸಿದಲ್ಲಿ ಅದರಿಂದ ವೈಯಕ್ತಿಕ ತೊಂದರೆ ಎದುರಾಗುವುದು. ಆದ್ದರಿಂದ ಸಮಯಕ್ಕೆ ಸೂಕ್ತ ಮಾತಿನ ವರಸೆ ಬಳಸುವುದು ಒಳ್ಳೆಯದು.

ಗಳಿಕೆಗೆ ಆಧಾರವಾಗುವಂತಹ ಹೊಸ ಯೋಜನೆಗಳಿಗೆ ಸಿದ್ಧತೆ ನಡೆಸುವಿರಿ. ಇದರಿಂದ ನಿಮ್ಮ ಕ್ರಿಯಾಶೀಲತೆಗೊಂದು ಬೆಲೆ ಬರಲಿದೆ. ಬಂಧು ಬಾಂಧವರು ನಿಮಗೆ ನೆರವು ನೀಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

ಕುಟುಂಬದಲ್ಲಿ ಶಾಂತಿಯ ವಾತಾವರಣ ಮೂಡಲಿದೆ. ಸಾಮಾಜಿಕ ಮತ್ತು ರಾಜಕೀಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣವಾಗಿ ಕೈಗೂಡುವವು. ಆರ್ಥಿಕ ಸ್ಥಿತಿಯಲ್ಲಿ ಅಲ್ಪ ಹಿನ್ನಡೆ ತೋರುವುದು.

 

ನಿಮಗೆ ನಿಮ್ಮ ಮಾತೇ ಬಂಡವಾಳವಾಗುವುದು. ಮಾತೇ ಮುತ್ತು ಮಾತೇ ಶತ್ರು ಎಂಬಂತೆ ನೀವು ಯೋಚಿಸಿ ಮಾತನಾಡುವ ಕಲೆಯಿಂದ ಇನ್ನಷ್ಟು ಸ್ನೇಹಿತರು ನಿಮಗೆ ಸೇರ್ಪಡೆ ಆಗುವರು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

 

ಇತರರು ಏನು ತಿಳಿದುಕೊಳ್ಳುತ್ತಾರೆ ಎಂದು ನೀವು ಸತ್ಯದ ಹಾದಿಯಿಂದ ವಿಮುಖರಾಗುವುದು ಒಳ್ಳೆಯದಲ್ಲ. ನಿಮಗೆ ಸರಿ ಎನಿಸಿದ್ದನ್ನು ಮಾಡುವ ಅಥವಾ ಹೇಳುವ ಹಕ್ಕು ನಿಮ್ಮದಾಗಿರುತ್ತದೆ. ನಿಮ್ಮ ನಿಲುವಿನಿಂದ ಹಿಂದೆ ಸರಿಯದಿರಿ

 

 

ನಿಮ್ಮ ಶ್ರಮಕ್ಕೆ ಹಾಗೂ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು. ಮತ್ತೊಬ್ಬರ ಜೀವನದ ಆಗು, ಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಖಾಸಗಿ ಹಾಗೂ ಸರ್ಕಾರಿ ನೌಕರರ ಬಾಕಿ ವೇತನ ಇಷ್ಟರಲ್ಲೇ ನಿಮ್ಮ ಕೈಸೇರಲಿದೆ.

 

ಮಾತಿನಲ್ಲೇ ಮನೆ ಕಟ್ಟುವ ಚತುರರಾದ ನೀವು ವಿಷಯಗಳು ತಿಳಿದಿದ್ದರೂ ಮುಗ್ಧರಂತೆ ಇರುವುದು ಉತ್ತಮ. ಬೇರೆಯವರ ವೈಯಕ್ತಿಕ ವಿಚಾರಗಳಲ್ಲಿ ಅತಿಯಾದ ಕುತೂಹಲ ಬೇಡ. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರುವುದು.

ನಿಮ್ಮ ಯಾವುದೇ ಪ್ರಯತ್ನಗಳಿಗೆ ಮನೆ ಸದಸ್ಯರ ಸಹಕಾರ, ಬೆಂಬಲ ದೊರೆಯುವ ಸಾಧ್ಯತೆ ಇದೆ. ಅದನ್ನು ಉಪಯೋಗಿಸಿಕೊಂಡು ಛಲದಲ್ಲಿ ಮುಂದುವರೆಯಿರಿ. ದುಡಿಮೆ ಎಷ್ಟೇ ಇದ್ದರೂ ಸಾಲದೆ ಹೋಗಬಹುದು.

 

ಕುಟುಂಬಕ್ಕೆ ಸಂಬಂಧಪಟ್ಟಂತೆ ಬಂಧುಗಳ ವೈಯಕ್ತಿಕ ವಿಚಾರಗಳ ಬಗ್ಗೆ ಮಧ್ಯಸ್ಥಿಕೆ ವಹಿಸುವುದು ಬೇಡ. ಶ್ರಮಜೀವಿಗಳಿಗೆ ಹೆಚ್ಚಿನ ದುಡಿಮೆಯಿಂದ ಅಧಿಕ ಧನ ಲಾಭವಾಗಲಿದೆ. ಮಿತ್ರರ ಸಹಕಾರ ದೊರೆಯುವುದು.

 

ಹಿಂದು, ಮುಂದು ಆಲೋಚಿಸದೆ ಅನುಭವಿಗಳ ಸಲಹೆ ಪಡೆಯದೆ, ಅಪರಿಚಿತರೊಂದಿಗೆ ಆರಂಭಿಸಿದ್ದ ವ್ಯಾಪಾರ, ನಷ್ಟದ ಹಾದಿಯಲ್ಲಿ ಸಾಗಲಿದೆ. ಆದಷ್ಟು ಎರಡೆರಡು ಬಾರಿ ಚಿಂತಿಸಿ ವ್ಯವಹರಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top