fbpx
ಸಮಾಚಾರ

ಆಗಸ್ಟ್ 16: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 16, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಅಷ್ಟಮೀ 7:45 am ನವಮೀ 5:34 am
ನಕ್ಷತ್ರ : ಅನುರಾಧ 3:02 am
ಯೋಗ : ಇಂದ್ರ 2:56 am
ಕರಣ : ಬಾವ 7:45 am ಬಾಲವ 6:40 pm

Time to be Avoided
ರಾಹುಕಾಲ : 7:44 am – 9:17 am
ಯಮಗಂಡ : 10:50 am – 12:23 pm
ದುರ್ಮುಹುರ್ತ : 12:48 pm – 1:38 pm, 3:17 pm – 4:07 pm
ವಿಷ : 8:12 am – 9:42 am
ಗುಳಿಕ : 1:56 pm – 3:30 pm

Good Time to be Used
ಅಮೃತಕಾಲ : 5:14 pm – 6:45 pm
ಅಭಿಜಿತ್ : 11:58 am – 12:48 pm

Other Data
ಸೂರ್ಯೋದಯ : 6:07 am
ಸುರ್ಯಾಸ್ತಮಯ : 6:40 pm
ರವಿರಾಶಿ : ಕರ್ಕಾಟಕ upto 25:32+
ಚಂದ್ರರಾಶಿ : ವೃಶ್ಚಿಕ

 

 

ಜನರೊಡನೆ ವ್ಯವಹರಿಸುವಾಗ ಎಚ್ಚರ ಇರಲಿ. ಗುಟ್ಟಿನ ವಿಚಾರಗಳನ್ನು ರಟ್ಟು ಮಾಡಿಕೊಳ್ಳಬೇಡಿರಿ. ವ್ಯವಹಾರಿಕ ಜಾಣ್ಮೆ ಬೆಳೆಸಿಕೊಳ್ಳಿರಿ. ಕಚೇರಿಯಲ್ಲಿ ಕೆಲಸದ ಒತ್ತಡ ಕಾಡುವುದು. ತಲೆನೋವಿನಂತಹ ಕಿರಿಕಿರಿ ಬಗ್ಗೆ ಎಚ್ಚರ ಇರಲಿ.

ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಕೆಲವು ಸಮಸ್ಯೆಗಳು ಬಗೆಹರಿಯುವುದರಿಂದ ನೆಮ್ಮದಿಯ ವಾತಾವರಣ ಕಂಡು ಬರುವುದು. ನಿಮ್ಮಿಂದಾಗಿ ಕೆಲವರ ಮುಖವಾಡ ಕಳಚಿ ಬೀಳುವುದು. ಇನ್ನೊಬ್ಬರನ್ನು ದೂರವಿರಿಸುವುದನ್ನು ಬಿಟ್ಟುಬಿಡಿರಿ.

 

ಎಲ್ಲರನ್ನೂ ಏಕಕಾಲಕ್ಕೆ ಸಂಭಾಳಿಸುವುದು ಕಷ್ಟಸಾಧ್ಯ. ಹಾಗಾಗಿ ಕೆಲವು ಕೆಲಸಗಳನ್ನು ಮನೆಯ ಸದಸ್ಯರಿಗೆ ಹಂಚಿಬಿಡಿರಿ. ಇಲ್ಲವೇ ಗೆಳೆಯರಿಗೆ ಕೆಲಸದ ಜವಾಬ್ದಾರಿಯನ್ನು ಹಂಚಿಕೊಡಿರಿ. ಆಗ ನೀವು ಆರಾಮದಿಂದ ಇರಬಹುದು.

ನಿಮ್ಮ ದ್ವಂದ್ವ ನಿಲುವಿನ ಬಗ್ಗೆ ಕೆಲವರು ಕುಹಕವಾಡಬಹುದು. ಅದಕ್ಕಾಗಿ ನೀವು ತಲೆಕೆಡಿಸಿಕೊಳ್ಳಬೇಡಿ. ದೂರದ ಊರಿಗೆ ಪಯಣಿಸುವ ಯೋಗ ನಿಮ್ಮದಾಗುವುದು. ಸಂಗಾತಿಯನ್ನು ಪ್ರೀತಿಯಿಂದ ಕಾಣಿರಿ.

 

ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು ಚಿಂತಿಸಿರಿ. ಸ್ನೇಹಿತರೊಂದಿಗೆ ಬೆರೆತು ಸಂತೋಷದಿಂದಿರಿ. ಎಲ್ಲವೂ ಭಗವಂತನ ಅಧೀನ, ಆತನ ಪ್ರೇರಣೆ ಇಲ್ಲದೆ ಜಗತ್ತಿನಲ್ಲಿ ಏನೊಂದೂ ನಡೆಯುವುದಿಲ್ಲ ಎಂಬ ಸತ್ಯದ ಅರಿವಾಗುತ್ತದೆ.

 

ಹಳೆಯ ಸ್ನೇಹಿತರು ಹೊಸದಾದ ಆಲೋಚನೆಯನ್ನು ನಿಮ್ಮ ಮುಂದೆ ಇಡುವರು. ಆ ಕ್ಷ ಣಕ್ಕೆ ಅದು ಸೂಕ್ತ ಎಂದು ತೋರಿಬರುವುದು. ಹಾಗಂತ ಅವರಿಗೆ ಆ ಕ್ಷ ಣವೇ ನಿಮ್ಮ ನಿರ್ಧಾರವನ್ನು ತಿಳಿಸದಿರಿ. ಕೆಲ ಸಮಯ ಕಾದು ಉತ್ತರಿಸುವುದು ಒಳ್ಳೆಯದು.

 

 

ಹೊಗಳಿಕೆಗೆ ಮನಸೋತು ಕೆಲವೊಮ್ಮೆ ಇಲ್ಲ-ಸಲ್ಲದ ಮಾತುಗಳು ನಿಮ್ಮ ಬಾಯಿಂದ ಹೊರ ಬರುವುದು. ಮಾತಿನ ಮೇಲೆ ಹಿಡಿತವಿರಲಿ. ಯಾರಾದರೂ ಹೊಗಳಿದರೆ ನಕ್ಕು ಸುಮ್ಮನಾಗಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು.

 

 

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.

 

ಯಾರದೋ ಮಾತುಗಳಿಂದ ಸ್ಥಿಮಿತ ಕಳೆದುಕೊಳ್ಳದಿರಿ. ಸಮಚಿತ್ತದಿಂದ ವರ್ತಿಸಿ, ಸಂಭ್ರಮದಿಂದಿರಿ. ಮನಸ್ಸಿನ ಬೇಸರ ಕಳೆಯಲು ಪಾರ್ಕ್‌ ಇಲ್ಲವೆ ದೇವಸ್ಥಾನಗಳಿಗೆ ಭೇಟಿ ಕೊಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಹಿರಿಯರ ಆರೋಗ್ಯದತ್ತ ಗಮನವಿರಲಿ. ಬಂಧು ಬಾಂಧವರೊಂದಿಗೆ ಹಿತಮಿತವಾಗಿ ಮಾತನಾಡಿ. ದೂರದೃಷ್ಟಿಯಿಂದ ಹಮ್ಮಿಕೊಳ್ಳುವ ಕೆಲಸಗಳಿಗೆ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

 

ನಿಮ್ಮ ನೆರೆಹೊರೆಯವರು ನೀವು ಅವರಿಗೆ ಮಾಡಿದ ಅಲ್ಪ ಸಹಾಯವನ್ನೇ ನೆನೆದು ನಿಮ್ಮನ್ನು ಕೊಂಡಾಡುವರು. ಇದರಿಂದ ನಿಮಗೂ ಸಂತೋಷವಾಗುವುದು. ಮಕ್ಕಳ ಪ್ರಗತಿ ಉತ್ತಮವಾಗಿರುತ್ತದೆ.

 

ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿ. ನೀವು ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top