fbpx
ಸಮಾಚಾರ

ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲಿ ಮಂಸೋರೆ ಕೂಡ ಪ್ರಮುಖರು. ಅವರ ಸಿನಿಮಾಗಳು ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿವೆ. ಈಗ ಮಂಸೋರೆ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಬಹುಕಾಲದ ಗೆಳತಿ ಅಖಿಲಾ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ.15ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್​ವೊಂದರಲ್ಲಿ ಅವರ ವಿವಾಹ ಸಮಾರಂಭ ನೆರವೇರಿದೆ.

ಜುಲೈ 4ರಂದು ಬೆಂಗಳೂರಿನಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇಂದು ಕನಕಪುರ ರಸ್ತೆಯ ತಲಘಟ್ಟಪುರ ಬಳಿ ಇರುವ ಶಿಬ್ರಾವ್ಯಿ ಕೋರ್ಟ್ ಯಾರ್ಡ್‍ನಲ್ಲಿ ಸಪ್ತಪದಿ ತುಳಿದಿದೆ. ಕೋವಿಡ್ ನಿಮಯಗಳನ್ನು ಅನುಸರಿಸಿ, ಈ ಮದುವೆ ಮಾಡಲಾಗಿದೆ. ಕೊವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಕೆಲವೇ ಸ್ನೇಹಿತರು, ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಂಸೋರೆ ಮತ್ತು ಅಖಿಲಾ ಹಸೆಮಣೆ ಏರಿದ್ದಾರೆ.

ಮಂಸೋರೆ ನಿರ್ದೇಶನದ ಎರಡನೇ ಸಿನಿಮಾ ‘ನಾತಿಚರಾಮಿ’ 2018ರಲ್ಲಿ ಬಿಡುಗಡೆಯಾಗಿತ್ತು. ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿದ್ದ ಆ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಗೌರವ ಸಿಕ್ಕಿತ್ತು. ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯು ಲಭಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top