fbpx
ಸಮಾಚಾರ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ ಹೊಂದಿರೋ ವ್ಯಕ್ತಿ ಬಿಗ್ ಬಾಸ್‌ನಲ್ಲಿ ಇರಬಾರದು: ನೆಟ್ಟಿಗರಿಂದ ತೀವ್ರ ಆಕ್ರೋಶ!

‘ಓ ಮೈ ಗಾಡ್‌’ ಡೈಲಾಗ್‌ ಮೂಲಕವೇ ಟಿಕ್‌ಟಾಕ್‌ನಲ್ಲಿ ಖ್ಯಾತಿ ಪಡೆದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಟಿಕ್‌ಟಾಕ್‌ ಸ್ಟಾರ್‌ ‘ಫನ್‌ ಬಕೆಟ್‌ ಭಾರ್ಗವ್‌’ ಎಂಬಾತನ ಮೇಲೆ ಅತ್ಯಾಚಾರ ಆರೋಪವಿದೆ. ಕೆಲವು ವರ್ಷಗಳ ಹಿಂದೆ ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದುಕೊಂಡು ಹೊರ ಬಂದಿರುವ ಭಾರ್ಗವ್‌ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಆಂಧ್ರ ಪೊಲೀಸರು ಟಿಕ್‌ಟಾಕ್‌ ಸ್ಟಾರ್‌ ಚಿಪ್ಪಡಾ ಭಾರ್ಗವ್ ಅಲಿಯಾಸ್ ಫನ್‌ ಬಕೆಟ್‌ ಭಾರ್ಗವ್‌ನ ಮೇಲಿದೆ.

‘ಅತ್ಯಾಚಾರ ಆರೋಪಿಯನ್ನು ಶೋಗೆ ಕರೆತಂದರೆ ನಾವು ಚಾನೆಲ್‌ಗೆ ಮುತ್ತಿಗೆ ಹಾಕುತ್ತೇವೆ’,’ ತಪ್ಪು ಮಾಡಿರುವ ವ್ಯಕ್ತಿ ಶಿಕ್ಷೆ ಅನುಭವಿಸಬೇಕು, ಬದಲಿಗೆ ಶೋನಲ್ಲಿ ಭಾಗವಹಿಸಿ ಖ್ಯಾತಿ ಪಡೆಯಬಾರದು’, ‘ಜನಪ್ರಿಯ ಶೋನಲ್ಲಿ ಆರೋಪಿಯನ್ನು ಕರೆತಂದು ಇಲ್ಲಿ ರಲ್ಲರಿಗೂ ಅದೇ ಹಾದಿ ಹಿಡಿಯುವಂತೆ ಹೇಳುತ್ತಿದ್ದೀರಾ?’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಬಿಗ್ ಬಾಸ್ ಆಯೋಜಕರ ಸ್ಪಷ್ಟನೆ:
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾದ ಕಾರಣ ಬಿಗ್ ಬಾಸ್ ತಂಡದವರು ಸ್ಪಷ್ಟನೆ ನೀಡಿದ್ದಾರೆ. ‘ಫನ್ ಬಕೆಟ್ ಭಾರ್ಗವ್‌ರನ್ನು ಬಿಗ್ ಬಾಸ್‌ ಸ್ಪರ್ಧಿಯಾಗಿ ಕರೆಯಲಾಗಿದೆ ಎಂಬುವುದು ಸುಳ್ಳು ಸುದ್ದಿ. ನಾವು ಯಾವುದೇ ಕಾರಣಕ್ಕೂ ಅತ್ಯಾಚಾರ ಆರೋಪಿಯನ್ನು ಕಾರ್ಯಕ್ರಮಕ್ಕೆ ಕರೆತರುವುದಿಲ್ಲ. ನಾವು ಆತನನ್ನು ಸಂಪರ್ಕ ಸಹ ಮಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top